ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಏಪ್ರಿಲ್ 10 ರ ವರೆಗೆ ಸುಮಾರು 1.6 ಲಕ್ಷ ಕೊರೋನಾವೈರಸ್ ಪರೀಕ್ಷೆಗಳನ್ನು ನಡೆಸಿದೆ. ಇದರಲ್ಲಿ 6872 ಸ್ಯಾಂಪಲ್ಗಳು ಪಾಸಿಟಿವ್ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಎಂಆರ್, “ಎಪ್ರಿಲ್ 10ರ ರಾತ್ರಿ 9 ಗಂಟೆಯವರೆಗೆ 1,47,034 ವ್ಯಕ್ತಿಗಳ 1,61,330 ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗಿದೆ” ಎಂದಿದೆ.
ಶುಕ್ರವಾರ ದೇಶದಾದ್ಯಂತ 15669 ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗಿದೆ, ಇದರಲ್ಲಿ 433 ಪಾಸಿಟಿವ್ ಬಂದಿದೆ.
ಗುರುತಿಸಲ್ಪಟ್ಟ ಹಾಟ್ ಸ್ಪಾಟ್ಗಳಲ್ಲಿ ಕರೋನಾವೈರಸ್ ಗುಣಲಕ್ಷಣಗಳನ್ನು ಹೊಂದಿರುವ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಅವುಗಳನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ ಎಂದು ದೇಶದ ಅಗ್ರಗಣ್ಯ ಆರೋಗ್ಯ ಸಂಸ್ಥೆ ಐಸಿಎಂಆರ್ ಹೇಳಿದೆ.
ಪ್ರಸ್ತುತ ದೇಶದಲ್ಲಿ 213 ಟೆಸ್ಟಿಂಗ್ ಲ್ಯಾಬೋರೇಟರಿಗಳು ಇವೆ. ಇವುಗಳ ಪೈಕಿ 146 ಸರ್ಕಾರಿ ಮತ್ತು 67 ಖಾಸಗಿ ಲ್ಯಾಬ್ಗಳಾಗಿವೆ.
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆ 7447ಕ್ಕೆ ಏರಿಕೆಯಾಗಿದೆ. ಇದರಲ್ಲಿ 6565 ಸಕ್ರಿಯ ಪ್ರಕರಣಗಳು, 643 ಗುಣಮುಖವಾದ ಪ್ರಕರಣಗಳು, 239 ಮೃತಪಟ್ಟ ಪ್ರಕರಣಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.