ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಮಹಾರಥೋತ್ಸವು ಎ.5 ರಂದು ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಗುರುವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಈ ಸಂದರ್ಭ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಮಾತನಾಡಿ, ಶ್ರೀ ಮಹಾಲಕ್ಷ್ಮೀ ದೇವಿಯ ರಥೋತ್ಸವದ ಪೂರ್ವಬಾವಿಯಾಗಿ ಗುರುವಾರ ತೋರಣ ಮುಹೂರ್ತ, ಅಂಕುರಾರೋಹಣ, ಶುಕ್ರವಾರ ಬೆಳಿಗ್ಗೆ 6-45 ಕ್ಕೆ ಧ್ವಜಾರೋಹಣ, ಶನಿವಾರ ಬೆಳಿಗ್ಗೆ 9-30 ಗಂಟೆಗೆ ನಾಗಾಲಯದಲ್ಲಿ ನವಕ ಪ್ರಧಾನಹೋಮ ನಡೆಯಲಿದೆ.
ಎ.5 ಭಾನುವಾರ ಮಧ್ಯಾಹ್ನ ಮಹಾರಥಾರೋಹಣ ನಡೆಯಲಿದ್ದು, ಬಳಿಕ ನಡೆಯುವ ಮಹಾ ಅನ್ನಸಂತರ್ಪಣೆಯಲ್ಲಿ ತಲಪಾಡಿಯಿಂದ ಬಾರ್ಕೂರು ತನಕದ ಸಮಾಜ ಬಾಂಧವರು ಭಾಗವಹಿಸಲಿರುವರು.
ಸಂಜೆ 5-30 ಗಂಟೆಗೆ ಭದ್ರಕಾಳಿ ಅಮ್ಮನವರ ದರ್ಶನ ನಡೆಯಲಿದ್ದು, ರಾತ್ರಿ 9 ಗಂಟೆಯಿಂದ ಶ್ರೀ ಮನ್ಮಹಾರಥೋತ್ಸವ, ಸಿಡಿಮದ್ದು ಪ್ರದರ್ಶನ, ಉತ್ಸವ ಬಲಿ, ಶ್ರೀ ಭೂತ ಬಲಿ, ಶಯನೋತ್ಸವ ರಾತ್ರಿ 11-30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೋಮವಾರ ರಾತ್ರಿ ಕೆರೆ ದೀಪೋತ್ಸವದ ಬಳಿಕ ಧ್ವಜಾವರೋಹಣದೊಂದಿಗೆ ಉತ್ಸವ ವಿಧಿ ಪೂರ್ಣಗೊಳ್ಳಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.