ನವದೆಹಲಿ: ವಿಶ್ವವನ್ನೇ ನಡುಗಿಸಿರುವ ಕೊರೋನಾ ಮಹಾಮಾರಿ ಭಾರತವನ್ನೂ ಬಿಟ್ಟೂ ಬಿಡದಂತೆ ಕಾಡುತ್ತಿದೆ. ದೇಶವನ್ನು ಈ ಸೋಂಕಿನಿಂದ ಮುಕ್ತಗೊಳಿಸುವ ಸಲುವಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಇದೀಗ ಕೇಂದ್ರ ಸರ್ಕಾರವು ವಿಶ್ವಕ್ಕೆ ಅನುಕೂಲವಾಗುವಂತೆ ಔಷಧಗಳ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಕಳೆದ ತಿಂಗಳು ಕೆಲವು ಔಷಧಗಳ ರಪ್ತಿನ ಮೇಲೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರ ಇದೀಗ 24 ಔಷಧೀಯ ವಸ್ತುಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಬಗ್ಗೆ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಅಧಿಸೂಚನೆಯನ್ನೂ ಹೊರಡಿಸಿದೆ.
ಈ ನಿರ್ಬಂಧದ ಕುರಿತಂತೆ ಕೆಲವು ಔಷಧ ಕಂಪನಿಗಳು ಕಳವಳ ವ್ಯಕ್ತಪಡಿಸಿದ್ದರಿಂದ ಇದೀಗ 24 ಬಗೆಯ ಔಷಧಗಳ ಮೇಲಿನ ರಪ್ತು ನಿಷೇಧವನ್ನು ತೆಗೆದು ಹಾಕಿದೆ. ಜೊತೆಗೆ ಮುಕ್ತವಾಗಿ ಇವುಗಳ ರಪ್ತು ನಡೆಯುವಂತೆ ಕ್ರಮ ತೆಗೆದುಕೊಳ್ಳಲಾಗಿದೆ. ವಿಟಮಿನ್ ಬಿ 1,6,12 ಹೊರತಾದಂತೆ ಟಿನಿಡಾಜೋಲ್, ಮೆಟ್ರೋನಿಡಾಜೋಲ್, ಕ್ಲೋರಂಫೆನಿಕೋಲ್, ಅರ್ನಿಡಾಜೋಲ್ ಮೊದಲಾದ 24 ಔಷಧಗಳನ್ನು ನಿರಾತಂಕವಾಗಿ ರಪ್ತು ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.