ನವದೆಹಲಿ: ಇಂದು ವಿಶ್ವ ಆರೋಗ್ಯ ದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾವೈರಸ್ ವಿರುದ್ಧ ಅವಿರತವಾಗಿ ಹೋರಾಟ ನಡೆಸುತ್ತಿರುವ ಕೊರೋನಾ ಯೋಧರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಇಂದು ವಿಶ್ವ ಆರೋಗ್ಯ ದಿನ. ನಾವು ಪರಸ್ಪರರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಪ್ರಾರ್ಥಿಸುವುದು ಮಾತ್ರವಲ್ಲ, ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುತ್ತಿರುವ ವೈದ್ಯರು, ನರ್ಸ್“ಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಸೇವಾ ಕಾರ್ಯಕರ್ತರಿಗೆ ನಮ್ಮ ಕೃತಜ್ಞತೆಗಳನ್ನು ಅರ್ಪಿಸೋಣ” ಎಂದಿದ್ದಾರೆ.
Today on #WorldHealthDay, let us not only pray for each other’s good health and well-being but also reaffirm our gratitude towards all those doctors, nurses, medical staff and healthcare workers who are bravely leading the battle against the COVID-19 menace. 🙏🏼
— Narendra Modi (@narendramodi) April 7, 2020
ಅಲ್ಲದೇ ಕೊರೋನವೈರಸ್ ಸಾಂಕ್ರಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುವಲ್ಲಿ ಸಾಮಾಜಿಕ ಅಂತರದ ಪ್ರಾಮುಖ್ಯತೆಯನ್ನು ಅವರು ಪ್ರತಿಪಾದಿಸಿದ್ದಾರೆ.
ಈ ದಿನ ಜನರಿಗೆ ತಮ್ಮ ವೈಯಕ್ತಿಕ ಫಿಟ್ನೆಸ್ ಮತ್ತು ಆರೋಗ್ಯದತ್ತ ಗಮನವನ್ನು ಕೇಂದ್ರೀಕರಿಸಲು ಸ್ಪೂರ್ತಿಯನ್ನು ನೀಡಲಿದೆ ಎಂದು ಅವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
“ವಿಶ್ವ ಆರೋಗ್ಯ ದಿನವಾದ ಇಂದು ನಾವು ಸಾಮಾಜಿಕ ಅಂತರದಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳೋಣ. ಇದು ನಮ್ಮ ಮಾತ್ರವಲ್ಲದೆ ಇತರರ ಜೀವವನ್ನೂ ಉಳಿಸುತ್ತದೆ. ಈ ದಿನ ನಮ್ಮ ವೈಯಕ್ತಿಕ ಫಿಟ್ನೆಸ್ ಮತ್ತು ಆರೋಗ್ಯದ ಕಡೆ ಗಮನವನ್ನು ನೀಡಲು ಸ್ಫೂರ್ತಿ ನೀಡಲಿ ಇದು ನಮ್ಮ ಸಮಗ್ರ ಆರೋಗ್ಯವನ್ನು ರಕ್ಷಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.
This #WorldHealthDay, let us also ensure we follow practices like social distancing which will protect our own lives as well as the lives of others. May this day also inspire us towards focusing on personal fitness through the year, which would help improve our overall health.
— Narendra Modi (@narendramodi) April 7, 2020
ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರಸ್ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ದಾದಿಯರು ಪ್ರತಿಯೊಬ್ಬರನ್ನು ಹೆಮ್ಮೆಪಡಿಸುತ್ತಿದ್ದಾರೆ ಮತ್ತು ಸ್ಪೂರ್ತಿ ತುಂಬುತ್ತಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.