ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನಾ ಪಡೆಗಳು ಮೂವರು ಉಗ್ರರನ್ನು ಹತ್ಯೆಗೈದಿದೆ.
ಕುಲ್ಗಾಂ ಜಿಲ್ಲೆಯ ದಮ್ಹಲ್ ಹಂಜಿಪೋರದ ಖುರ್ ಬತ್ಪೋರ ಗ್ರಾಮದ ಸಮೀಪ ಸೇನಾಪಡೆಗಳು ಬೆಳಗ್ಗೆ 5.45 ಕ್ಕೆ ಕಾರ್ಯಾಚರಣೆಯನ್ನು ನಡೆಸಿದವು.
ಸಿಆರ್ಪಿಎಫ್ನ 18ನೇ ಬೆಟಾಲಿಯನ್, 9ನೇ ರಾಷ್ಟ್ರೀಯ ರೈಫಲ್ಸ್, ಎಸ್ಓಜಿ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿವೆ.
ಸುದೀರ್ಘ ಸಮಯದವರೆಗೆ ನಡೆದ ಕಾರ್ಯಾಚರಣೆಯ ಬಳಿಕ ಮೂವರು ಉಗ್ರರು ಹತರಾಗಿದ್ದಾರೆ.
ಈ ಮೂವರು ಉಗ್ರರು ಇತ್ತೀಚಿಗೆ ಮೂವರು ನಾಗರಿಕರನ್ನು ಕೊಲೆ ಮಾಡಿದ್ದರು ಎಂದು ತಿಳಿದುಬಂದಿದೆ.
ಶುಕ್ರವಾರ ಮಹತ್ವದ ಬೆಳವಣಿಗೆಯೊಂದರಲ್ಲಿ, ಸೇನಾಪಡೆಗಳು ಲಷ್ಕರ್-ಎ-ತೊಯ್ಬಾದ ಸಂಪರ್ಕ ಹೊಂದಿದ್ದ ಭಯೋತ್ಪಾದಕ ಮಾದರಿಯೊಂದನ್ನು ಬಹಿರಂಗಪಡಿಸಿದ್ದು, ಇದರ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ.
ಎಕೆ 47 ರೈಫಲ್, 8 ಎಕೆ 47 ಮ್ಯಾಗಜಿನ್, 332 ಎಕೆ 47 ರೌಂಡ್ಸ್, 12 ಹ್ಯಾಂಡ್ ಗ್ರೆನೇಡ್, ಮೂರು ಪಿಸ್ತೂಲು ಮತ್ತು ಆರು ಪಿಸ್ತೂಲ್ ಮ್ಯಾಗಜೀನ್ಗಳನ್ನು ಉಗ್ರರಿಂದ ಪಡಿಸಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.