
ನವದೆಹಲಿ: ಕೊರೋನವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯ ಮಾಡಲು ಇಚ್ಛಿಸುವವರು ಮತ್ತು ಸಹಾಯದ ನಿರೀಕ್ಷೆಯಲ್ಲಿರುವ ಜನರನ್ನು ಯಾವುದೇ ಅಡೆತಡೆಗಳೂ ಇಲ್ಲದಂತೆ ಪರಸ್ಪರ ಬೆಸೆಯುತ್ತಿದೆ I CAN ಎಂಬ ವಿನೂತನ ವೇದಿಕೆ.
ನಾಗರಿಕ ಸಮಾಜದ ಎರಡು ಸಂಸ್ಥೆಗಳು ಒಟ್ಟುಗೂಡಿ ವೇದಿಕೆಯನ್ನು ರಚನೆ ಮಾಡಿವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯ ಬಯಸುವ ಜನರಿಗೆ ತ್ವರಿತಗತಿಯಲ್ಲಿ ಸಹಾಯ ಸಿಗಲಿ ಎಂಬ ಆಶಯದೊಂದಿಗೆ ಇದನ್ನು ರಚನೆ ಮಾಡಲಾಗಿದೆ.
ಬಿಜೆಪಿಯ ಉಪಾಧ್ಯಕ್ಷ ಮತ್ತು ಸಂಸದರಾಗಿರುವ ಡಾ. ವಿನಯ್ ಸಹಸ್ರಬುದ್ದೆ ಮತ್ತು ದೆಹಲಿಯ ಕನೆಕ್ಟಿಂಗ್ ಡ್ರೀಮ್ಸ್ ಫೌಂಡೇಶನ್ ಮುಖ್ಯಸ್ಥ ಅಮಿತ್ ತುತೇಜ ಅವರು ಐ ಕ್ಯಾನ್ ವೇದಿಕೆಯನ್ನು ಹುಟ್ಟುಹಾಕಿದ್ದಾರೆ.
“ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಾವು ಅಸ್ಥಿರ, ಕಲ್ಪನೆಗೂ ನಿಲುಕದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಪರಿಹಾರದ ಮತ್ತು ಪುನರ್ವಸತಿಯ ಹೊಸ ವಿಷಯಗಳತ್ತ ನಾವು ಹೊರಳಬೇಕಾಗಿದೆ. ಕೆಲವು ಜನರು ತಮ್ಮ ಕೈಲಾದಷ್ಟು ಸಹಾಯವನ್ನು ಅಗತ್ಯವಿರುವ ಜನರಿಗೆ ಮಾಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಯಾವುದೇ ಅಡೆತಡೆ ಇಲ್ಲದೆ ಸಹಾಯ ಬಯಸುವವರು ಮತ್ತು ಸಹಾಯ ಮಾಡಲು ಇಚ್ಛಿಸುವ ಅವರನ್ನು ಪರಸ್ಪರ ಬೆಸೆಯುವ ಸಲುವಾಗಿ ನಾವು ವೇದಿಕೆಯನ್ನು ಸೃಷ್ಟಿಸಿದ್ದೇವೆ. ಇದಕ್ಕೆ ‘I CAN’, India Co-win Action Network ಎಂದು ಹೆಸರಿಸಿದ್ದೇವೆ” ಎಂದು ಸಹಸ್ರಬುದ್ಧೆ ಹೇಳಿದ್ದಾರೆ.
ಈ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಇಚ್ಚಿಸುವ ಜನರಿಗೆ ಈ ವೇದಿಕೆಯು ಸಹಾಯ ಮಾಡಲಿದೆ. ಇದರಲ್ಲಿ ಈಗಾಗಲೇ 20 ರಾಜ್ಯಗಳ 376 ಸ್ವಯಂಸೇವಕರು ಕೇವಲ ಮೂರು ದಿನಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 157 ಸವಾಲುಗಳನ್ನು ಈಗಾಗಲೇ ಈ ವೇದಿಕೆ ಎದುರಿಸಿದ್ದು, 2007 ನೂರು ಜನರಿಗೆ ಸಹಾಯ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


