ನವದೆಹಲಿ: ಲಾಕ್ ಡೌನ್ ಸಮಯದಲ್ಲಿ ಜನರು ಸದೃಢವಾಗಿರಲು ಪ್ರೋತ್ಸಾಹಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ತಮ್ಮ ಯೋಗಾಸನ ವಿಡಿಯೋವನ್ನು ಪ್ರತಿದಿನ ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ.
“ನನಗೆ ಸಮಯ ಸಿಕ್ಕಾಗಲೆಲ್ಲಾ ನಾನು ವಾರದಲ್ಲಿ ಒಂದು ಅಥವಾ ಎರಡು ಬಾರಿ ಯೋಗ ನಿದ್ರಾ ಅಭ್ಯಾಸ ಮಾಡುತ್ತೇನೆ. ಇದು ನಮ್ಮ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ”ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಇಂಟರ್ನೆಟ್ನಲ್ಲಿ ಯೋಗ ನಿದ್ರೆಯ ಅನೇಕ ವೀಡಿಯೊಗಳನ್ನು ನಾವು ಕಾಣಬಹುದು ಎಂದಿದ್ದಾರೆ.
ಯುಎಸ್ ಅಧ್ಯಕ್ಷ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಅವರು ಮೋದಿಯವರು ಹಂಚಿಕೊಂಡ ವೀಡಿಯೊವನ್ನು ಮೆಚ್ಚಿದವರಲ್ಲಿ ಮೊದಲಿಗರು.
ತಮ್ಮ ಇತ್ತೀಚಿನ “ಮನ್ ಕಿ ಬಾತ್” ರೇಡಿಯೊ ಕಾರ್ಯಕ್ರಮದಲ್ಲಿ 21 ದಿನಗಳ ಲಾಕ್ಡೌನ್ ಸಮಯದಲ್ಲಿ ಹೇಗೆ ಫಿಟ್ ಆಗಿರುತ್ತೀರಾ ಎಂಬ ಪ್ರಶ್ನೆಯನ್ನು ಮೋದಿಗೆ ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ ಮೋದಿ ಫಿಟ್ನೆಸ್ ವೀಡಿಯೊಗಳನ್ನು ಹಂಚಿಕೊಳ್ಳುವುದಾಗಿ ಭರವಸೆ ನೀಡಿದ್ದರು.
ಮೋದಿ ವಿಡಿಯೋಗೆ “ಇದು ಅದ್ಭುತವಾಗಿದೆ. ಧನ್ಯವಾದಗಳು” ಎಂದು ಇವಾಂಕ ಟ್ರಂಪ್ ಟ್ವೀಟ್ ಮಾಡಿದ್ದಾರೆ. #TogetherApart ಹ್ಯಾಶ್ಟ್ಯಾಗ್ ನೀಡಿದ್ದಾರೆ.
This is wonderful! Thank you @narendramodi!#TogetherApart https://t.co/k52G4viwDs
— Ivanka Trump (@IvankaTrump) March 31, 2020
ಸೋಮವಾರ ಯೂಟ್ಯೂಬ್ ಯೋಗ ವಿಡಿಯೋಗಳನ್ನು ಹಂಚಿಕೊಂಡ ಮೋದಿ ಅವರು, ತಾನು ಫಿಟ್ನೆಸ್ ಅಥವಾ ವೈದ್ಯಕೀಯ ತಜ್ಞನಲ್ಲ ಎಂದು ಹೇಳಿದ್ದಾರೆ.
“ಯೋಗಾಭ್ಯಾಸ ಮಾಡುವುದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ನಿಮ್ಮಲ್ಲಿ ಹಲವರು ಫಿಟ್ ಆಗಿ ಇರಲು ಇತರ ಮಾರ್ಗಗಳನ್ನು ಸಹ ಹೊಂದಿದ್ದೀರಿ ಎಂದು ನನಗೆ ಖಾತ್ರಿಯಿದೆ, ಅದನ್ನು ನೀವು ಸಹ ಹಂಚಿಕೊಳ್ಳಬೇಕು, ”ಎಂದು ಅವರು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.