
ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಸಂಶೋಧಕರು ಎರಡು ರೋಬೋಟ್ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದನ್ನು ಕೋವಿಡ್-19 ರೋಗಿಗಳಿಗೆ ಆಹಾರ ಮತ್ತು ಔಷಧಿಗಳನ್ನು ತಲುಪಿಸಲು ಬಳಸಿಕೊಳ್ಳಲಾಗುತ್ತದೆ.
ಐಸೋಲೋಷನ್ ವಾರ್ಡ್ಗಳಲ್ಲಿನ ತ್ಯಾಜ್ಯ ಸಂಗ್ರಹಕ್ಕಾಗಿಯೂ ಬಳಸಿಕೊಳ್ಳಬಹುದು.
ಈ ರೋಬೋಟ್ಗಳನ್ನು COVID-19 ಸೋಂಕಿತ ಪ್ರಕರಣಗಳು ಇರುವ ಪ್ರತ್ಯೇಕ ವಾರ್ಡ್ಗಳಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ.
ಐಐಟಿ ಗುವಾಹಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗಗಳ ತಂಡವು ಅಭಿವೃದ್ಧಿಪಡಿಸುತ್ತಿರುವ ಈ ರೋಬೋಟ್ಗಳು ಐಸೋಲೇಷನ್ ವಾರ್ಡ್ಗಳಲ್ಲಿ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲಿದೆ.
“ನಾವು ಎರಡು ರೋಬೋಟ್ಗಳ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇವುಗಳಲ್ಲಿ ಮೊದಲನೇ ರೋಬೋ ಅನ್ನು ಪ್ರತ್ಯೇಕ ವಾರ್ಡ್ಗಳಿಗೆ ಆಹಾರ, ಔಷಧಿ ವಿತರಣೆಗೆ ಆಸ್ಪತ್ರೆಯ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದು ಮತ್ತು ಎರಡನೇ ರೋಬೋಟ್ ಪ್ರತ್ಯೇಕವಾಗಿ ವಾರ್ಡ್ಗಳಿಂದ ವಿಷಕಾರಿ ಮತ್ತು ಸಾಂಕ್ರಾಮಿಕ ತ್ಯಾಜ್ಯ ಸಂಗ್ರಹಕ್ಕಾಗಿ ಬಳಸಿಕೊಳ್ಳಬಹುದು” ಎಂದು ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
“ಎರಡು ವಾರಗಳಲ್ಲಿ ಮೂಲಮಾದರಿಗಳು ಸಿದ್ಧವಾಗುತ್ತವೆ, ಅದರ ನಂತರ ಇನ್ಸ್ಟಿಟ್ಯೂಟ್ ಆಸ್ಪತ್ರೆ ಮತ್ತು ನ್ಯಾನೊತಂತ್ರಜ್ಞಾನ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಗುವುದು, ಅಲ್ಲಿ ಆರೋಗ್ಯ ಕೇಂದ್ರದ ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಇದರ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗುವುದು ಎಂದಿದ್ದಾರೆ.
ರೋಬೋಟ್ ಆಧಾರಿತ ಸ್ಕ್ರೀನಿಂಗ್ ಘಟಕಗಳನ್ನು ಸಹ ಮಾಡುವ ಯೋಜನೆ ಇದೆ ಎಂದು ಅವರು ಹೇಳಿದ್ದಾರೆ.
COVID-19 ವಿಶ್ಲೇಷಣೆಗಾಗಿ ಸುಧಾರಿತ ಸಂಶೋಧನಾ ಕೇಂದ್ರ ಮತ್ತು ಪ್ರಯೋಗಾಲಯವನ್ನು ಸ್ಥಾಪಿಸುವ ಪ್ರಕ್ರಿಯೆಯೂ ಸಹ ನಡೆಯುತ್ತಿದೆ, ಇದು COVID-19 ಮತ್ತು ಇತರ ಭಯಾನಕ ವೈರಸ್ ಪತ್ತೆ ಮತ್ತು ರೋಗನಿರ್ಣಯವನ್ನು ಪರೀಕ್ಷಿಸಲು ಇಡೀ ಈಶಾನ್ಯ ಪ್ರದೇಶಕ್ಕೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


