ನವದೆಹಲಿ: ಮಾರಣಾಂತಿಕ ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಮುಂದುವರೆಸಲು, ಆರೋಗ್ಯ ಸಚಿವಾಲಯ ಮತ್ತು ಮೈಗೌ COVID-19 ಬಗೆಗಿನ ಅಪ್ಡೇಟ್ ಮತ್ತು ಮಾಹಿತಿಯನ್ನು ಒದಗಿಸಲು ಫೇಸ್ಬುಕ್ ಮೆಸೆಂಜರ್ನಲ್ಲಿ ಕೊರೋನಾ ಹೆಲ್ಪ್ಡೆಸ್ಕ್ ಚಾಟ್ಬಾಟ್ ಅನ್ನು ಪ್ರಾರಂಭಿಸಿದೆ.
ಕೊರೋನಾ ಹೆಲ್ಪ್ಡೆಸ್ಕ್ ಚಾಟ್ಬಾಟ್ ಮಾರಕ ಕೊರೋನವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಮಾಡಬೇಕಾದುದು ಮತ್ತು ಮಾಡಬಾರದ್ದುಗಳನ್ನು ಸೂಚಿಸುತ್ತದೆ.
ಮೈಗೌ ಸಿಇಒ ಅಭಿಷೇಕ್ ಸಿಂಗ್ ಟ್ವಿಟ್ಟರ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
#COVID19 ಹರಡುವುದನ್ನು ತಡೆಗಟ್ಟಲು ಅಪ್ಡೇಟೆಡ್ ಮಾಹಿತಿಗಳನ್ನು ಪಡೆಯಲು ಮತ್ತು ವೈರಸ್ ಪಸರಿಸುವಿಕೆಯ ತಡೆಗಟ್ಟಲು ನಾವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗೆಗಿನ ಮಾಹಿತಿಗಳನ್ನು ಮೈಗೌವ್ ತನ್ನ ಕೊರೋನಾ ಹೆಲ್ಪ್ಡೆಸ್ಕ್ ಚಾಟ್ಬಾಟ್ ಅನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಪ್ರಾರಂಭಿಸಿದೆ” ಎಂದಿದ್ದಾರೆ.
Https://facebook.com/MyGovIndia/ ನಲ್ಲಿ ಮೈಗೌ ಫೇಸ್ಬುಕ್ ಲೈಕ್ ಮಾಡಿ. Http://M.me/MyGovIndia ನಲ್ಲಿ ಚಾಟ್ಬಾಟ್ ಪರಿಶೀಲಿಸಿ, ’’ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
MyGov launched its Corona Helpdesk chatbot on #Facebook #messenger to get update information and dos and Donts to prevent the spread of #COVID19.
Like the MyGov Facebook at https://t.co/ZvEoT1REWk.
Check out the chatbot on https://t.co/F7A2ornmw3#IndiaFightsCorona
— abhishek singh (@abhish18) March 26, 2020
ಸರ್ಕಾರವು ಈ ಹಿಂದೆ ವಾಟ್ಸಾಪ್ನಲ್ಲಿ ಚಾಟ್ ಬಾಟ್ ಪ್ರಾರಂಭಿಸಿತ್ತು ಮತ್ತು COVID-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ.
ವಿಶ್ವಾಸಾರ್ಹ ಮಾಹಿತಿಗಾಗಿ ದೇಶಾದ್ಯಂತ ವಾಟ್ಸಾಪ್ ಬಳಕೆದಾರರು ಆರೋಗ್ಯ ಸಚಿವಾಲಯಕ್ಕೆ +91 9013151515 ಮೂಲಕ ಸಂಪರ್ಕಿಸಬಹುದು ಮತ್ತು ಮುನ್ನೆಚ್ಚರಿಕೆ ಕ್ರಮಗಳು ಅಥವಾ ಚಿಕಿತ್ಸಾ ಪದ್ಧತಿಗಳ ಬಗ್ಗೆ ಯಾವುದೇ ಅನಿಶ್ಚಿತ ಮಾಹಿತಿಯನ್ನು ಇಲ್ಲಿ ಪರಿಶೀಲಿಸಬಹುದು.
ಸಹಾಯವಾಣಿಯನ್ನು ಸಂಪರ್ಕಿಸಲು, ನಾಗರಿಕರು ತಮ್ಮ ಫೋನ್ನಲ್ಲಿ ವಾಟ್ಸಾಪ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು. ತದನಂತರ “ಹಾಯ್” ಎಂದು ಟೈಪ್ ಮಾಡಿ ಅದನ್ನು ಸಂಖ್ಯೆಗೆ ಕಳುಹಿಸುವ ಮೂಲಕ ಚಾಟ್ ಪ್ರಾರಂಭಿಸಬೇಕು. ಕೇಳಲಾಗುವ ಪ್ರಶ್ನೆಗೆ ಅನುಗುಣವಾಗಿ, ಬಳಕೆದಾರರು ಪರಿಶೀಲಿಸಿದ ಮಾಹಿತಿಯನ್ನು ವೀಡಿಯೊ, ಇನ್ಫೋಗ್ರಾಫಿಕ್ ಅಥವಾ ಪಠ್ಯದ ರೂಪದಲ್ಲಿ ಸ್ವೀಕರಿಸುತ್ತಾರೆ.
“COVID 19 ಸಾಂಕ್ರಾಮಿಕದಂತಹ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ, ನಾವು ವಾಸ್ತವಿಕವಾಗಿ ಸರಿಯಾದ ಮತ್ತು ಪರಿಶೀಲಿಸಿದ ಮಾಹಿತಿಯನ್ನು ಮಾತ್ರ ಅವಲಂಬಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ವರ್ಧನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.