ನವದೆಹಲಿ: ಕೊರೋನ ವೈರಸ್ನಿಂದಾಗಿ ಸಂಪೂರ್ಣವಾಗಿ ಜರ್ಜರಿತವಾಗಿರುವ ಇಟಲಿಗೆ ಭಾರತವು ನೆರವನ್ನು ಕಳುಹಿಸಿಕೊಟ್ಟಿದೆ.
ಸ್ವತಃ ಕೊರೋನದಿಂದ ತತ್ತರಿಸಿರುವ ಭಾರತ, ಸಂಕಷ್ಟದ ಸಂದರ್ಭದಲ್ಲೂ ಇನ್ನೊಂದು ದೇಶಕ್ಕೆ ನೆರವಿನ ಹಸ್ತ ಚಾಚಿದೆ. ಮಾಸ್ಕ್ ಮತ್ತು ವೈದ್ಯಕೀಯ ಪರಿಕರಗಳನ್ನು ಭಾರತದಿಂದ ಅಲ್ಲಿಗೆ ಕಳುಹಿಸಿಕೊಡಲಾಗಿದೆ.
ಭಾರತದ ಉಡುಗೊರೆಯನ್ನು ಸ್ವೀಕರಿಸಿರುವ ಸಚಿವಾಲಯವು, “ಈ ಅಗತ್ಯದ ಸಂದರ್ಭದಲ್ಲಿ ಸ್ನೇಹಪರತೆ ಮತ್ತು ಉದಾರತೆಯನ್ನು ತೋರಿಸಿದ್ದಕ್ಕಾಗಿ ನಾವು ಚಿರಋಣಿಗಳಾಗಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತವು ಕಳೆದ ತಿಂಗಳು ಚೀನಾಗೆ 15 ಟನ್ ವೈದ್ಯಕೀಯ ಪರಿಕರಗಳನ್ನು ಕಳುಹಿಸಿಕೊಟ್ಟಿತ್ತು. ಅದರಲ್ಲಿ ಮಾಸ್ಕ್, ಗ್ಲೌಸ್ ಮತ್ತು ವೈದ್ಯಕೀಯ ಪರಿಕರಗಳ ಸೇರಿದ್ದವು. ಭಾರತದ ಸಿ-17 ವಿಶೇಷ ವಿಮಾನವು ಈ ಪರಿಕರಗಳನ್ನು ಹೊತ್ತು ಚೀನಾದ ವುಹಾನ್ ನಗರಕ್ಕೆ ಪ್ರಯಾಣಿಸಿತ್ತು.
ಭೂತಾನ್, ಮಾಲ್ಡೀವ್ಸ್ನಂತಹ ದಕ್ಷಿಣ ಏಷ್ಯಾ ದೇಶಗಳಿಗೂ ಭಾರತ ನೆರವನ್ನು ಕಳುಹಿಸಿಕೊಟ್ಟಿದೆ. ನೇಪಾಳಕ್ಕೂ ನೆರವು ನೀಡುವ ಪ್ರಕ್ರಿಯೆಯಲ್ಲಿದೆ.
ಭಾರತದಲ್ಲಿ ಒಟ್ಟು ಕೊರೋನವೈರಸ್ ಪ್ರಕರಣಗಳ ಸಂಖ್ಯೆ 329ಕ್ಕೆ ಏರಿದೆ. 23 ಮಂದಿ ಚೇತರಿಸಿಕೊಂಡಿದ್ದಾರೆ. 7 ಮಂದಿ ಸಾವನ್ನಪ್ಪಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.