
ಮುಂಬೈ: ಮುಂಬಯಿ ಮೂಲದ ಔಷಧಿ ದಿಗ್ಗಜ ಸಿಪ್ಲಾ ಸರ್ಕಾರಿ ಪ್ರಯೋಗಾಲಯಗಳ ಸಹಭಾಗಿತ್ವದಲ್ಲಿ COVID-19 ಅನ್ನು ಗುಣಪಡಿಸಲು ಔಷಧಿಗಳ ತ್ವರಿತಗತಿಯ ಅಭಿವೃದ್ಧಿಯಲ್ಲಿ ಕೈಜೋಡಿಸಿದೆ. ಆದರೆ ಭಾರತದಲ್ಲಿ COVID-19 ಹರಡುವುದನ್ನು ತಪ್ಪಿಸಲು ಉಸಿರಾಟ, ಅಸ್ತಮಾ, ಆ್ಯಂಟಿವೈರಲ್ಗಳು ಮತ್ತು ಎಚ್ಐವಿ ಔಷಧಿಗಳನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಸಂಧಿವಾತದ ಚಿಕಿತ್ಸೆಯಲ್ಲಿ ಬಳಸಲಾಗುವ ಸಿಪ್ಲಾ ಔಷಧಿ ಆಕ್ಟೇಮ್ರಾವನ್ನು ಇತ್ತೀಚೆಗೆ ಚೀನಾವು COVID-19 ಗೆ ಸಂಬಂಧಿಸಿದ ತೀವ್ರ ಗಂಭೀರ ಸ್ಥಿತಿಯಲ್ಲಿನ ರೋಗಿಗಳ ಚಿಕಿತ್ಸೆಯ ಬಳಕೆಗೆ ಅನುಮೋದಿಸಿದೆ ಎಂದು ಸಹ ಹೇಳಲಾಗಿದೆ.
ಉಸಿರಾಟ, ಎಚ್ಐವಿ ಮತ್ತು ಜ್ವರ ಚಿಕಿತ್ಸೆಯಲ್ಲಿ ಹಲವು ಆವಿಷ್ಕಾರಗಳಿಗೆ ಹೆಸರುವಾಸಿಯಾದ ಸಿಪ್ಲಾ ಸಂಸ್ಥೆಯ ಪ್ರಮೋಟರ್ ಯೂಸುಫ್ ಹಮೀದ್, “ನಮ್ಮ ಎಲ್ಲಾ ಸಂಪನ್ಮೂಲಗಳನ್ನು ದೇಶಕ್ಕೆ ಅನುಕೂಲವಾಗುವಂತೆ ಮಾಡುವುದು ರಾಷ್ಟ್ರೀಯ ಕರ್ತವ್ಯವೆಂದು ನಾವು ಪರಿಗಣಿಸುತ್ತೇವೆ” ಎಂದು ಹೇಳಿದ್ದಾರೆ.
ಎಚ್ 1 ಎನ್ 1 ಇನ್ಫ್ಲುಯಂಝ ಜೆನೆರಿಕ್ ಔಷಧಿಯನ್ನು ಪ್ರಾರಂಭಿಸಿದ ಮೊದಲ ಕಂಪನಿಗಳಲ್ಲಿ ಒಂದಾದ ಸಿಪ್ಲಾ ಕಂಪನಿಯು COVID-19 ವಿರುದ್ಧ ಔಷಧಿಗಳನ್ನು ಪರಿಚಯಿಸಿದ ಮೊದಲ ದೇಶೀಯ ಕಂಪನಿಯಾಗುವ ಗುರಿಯನ್ನು ಹೊಂದಿದೆ.
ಆ್ಯಂಟಿವೈರಲ್ ಸಂಯುಕ್ತಗಳಾದ ಫೆವಿಪಿರವಿರ್, ರೆಮಿಡೆಸಿವಿರ್ ಮತ್ತು ಬೋಲಾಕ್ಸಾವಿರ್ ಗಳಿಗಾಗಿ ಕಂಪನಿಯು ಪ್ರಸ್ತುತ ಕಚ್ಚಾ ವಸ್ತುಗಳ ಉತ್ಪಾದನೆಯನ್ನು ಸರ್ಕಾರಿ ಪ್ರಯೋಗಾಲಯಗಳ ಸಹಾಯದಿಂದ ನಡೆಸುವ ಬಗ್ಗೆ ಪರಿಶೀಲಿಸುತ್ತಿದೆ. ಕಚ್ಚಾ ವಸ್ತುಗಳ (ಸಕ್ರಿಯ ಔಷಧೀಯ ಪದಾರ್ಥಗಳು) ಖರೀದಿ ಪ್ರಾರಂಭವಾದ ನಂತರ ಅಂತಿಮ ಔಷಧಿಗಳ ತಯಾರಿಕೆ ಪ್ರಾರಂಭಿಸಲು ಆರು ತಿಂಗಳ ಸಮಯ ಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


