ನವದೆಹಲಿ: ಸಾರ್ಕ್ ದೇಶಗಳಲ್ಲಿ ಮಾರಕ ವೈರಸ್ ಹರಡುವುದನ್ನು ನಿಭಾಯಿಸಲು COVID-19 ತುರ್ತು ನಿಧಿಗೆ ಕೊಡುಗೆ ನೀಡಿದ ಭೂತಾನ್ ಮತ್ತು ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಧನ್ಯವಾದ ಅರ್ಪಿಸಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಉಭಯ ದೇಶಗಳ ನಾಯಕರು ನೀಡಿದ ಕೊಡುಗೆಗೆ ಧನ್ಯವಾದ ಹೇಳಿದರು.
ಮಾರ್ಚ್ 15 ರಂದು ಸಾರ್ಕ್ ನಾಯಕರುಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮೋದಿ, ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ತರ್ತು ನಿಧಿ ಸ್ಥಾಪಿಸುವ ಪ್ರಸ್ತಾಪವನ್ನು ಮಾಡಿದ್ದರು. ಇದಕ್ಕೆ $10 ಮಿಲಿಯನ್ ಕೊಡುಗೆಯನ್ನು ನೀಡಿದ್ದರು. ಇದಕ್ಕೆ ಎಲ್ಲಾ ಸಾರ್ಕ್ ನಾಯಕರು ಬೆಂಬಲವನ್ನು ಸೂಚಿಸಿದ್ದರು.
ಇದೀಗ ನೇಪಾಳ ಮತ್ತು ಭೂತಾನ್ ಕೂಡ ಸಾರ್ಕ್ ಕೋವಿಡ್-19 ತುರ್ತು ನಿಧಿಗೆ ಹಳಕಾಸು ನೆರವನ್ನು ಘೋಷಣೆ ಮಾಡಿವೆ. ನೇಪಾಳ 10 ಕೋಟಿ ನೇಪಾಳ ರೂಪಾಯಿ ಮತ್ತು ಭೂತಾನ್ $ 1,00,000 ಮಿಲಿಯನ್ ನೆರವು ಘೋಷಣೆ ಮಾಡಿದೆ.
ಕೊರೋನವೈರಸ್ ವಿರುದ್ಧದ ಸಾಮೂಹಿಕ ಹೋರಾಟಕ್ಕೆ ಶಕ್ತಿ ತುಂಬಲು ಸಾರ್ಕ್ ನಾಯಕರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಅದ್ಭುತವಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ.
Gratitude to @PMBhutan Dr. Lotay Tshering for his decision to contribute $100,000 to the COVID-19 Emergency Fund on behalf of the Bhutanese Government. It is wonderful to see SAARC leaders taking initiatives that are adding strength to the collective fight against Coronavirus.
— Narendra Modi (@narendramodi) March 20, 2020
Deeply appreciate PM @kpsharmaoli’s announcement of contribution of NPR 10 crores to the COVID-19 Emergency Fund. It reflects Oli Ji’s commitment and support to the collective fight of SAARC countries against the pandemic.
— Narendra Modi (@narendramodi) March 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.