ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗವು ಭಾರತದಾದ್ಯಂತ ಹರಡುತ್ತಿರುವುದರಿಂದ ನೈರ್ಮಲ್ಯ ಕಾಪಾಡಲು ಅತ್ಯಗತ್ಯವಾಗಿರುವ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಫೇಸ್ ಮಾಸ್ಕ್ ನಂತಹ ಅಗತ್ಯ ವಸ್ತುಗಳ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ, ಅಲ್ಲದೇ ಇವುಗಳನ್ನು ದುಪ್ಪಟ್ಟುಗೊಳಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ.
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ್ದು, “ಅತ್ಯಗತ್ಯ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಎರಡು ಮತ್ತು ಮೂರು ಪ್ಲೈ ಮಾಸ್ಕ್ನಲ್ಲಿ ಬಳಸುವ ಫ್ಯಾಬ್ರಿಕ್ ಫೆ.12ರಂದು ಇದ್ದಂತೆ ಕ್ರಮವಾಗಿ ರೂ.8 ಮತ್ತು ರೂ.10 ಆಗಿರುತ್ತದೆ” ಎಂದಿದ್ದಾರೆ.
“ಕೊರೋನವೈರಸ್ ಉಲ್ಬಣಗೊಂಡಾಗಿನಿಂದ, ಫೇಸ್ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಅದರ ತಯಾರಿಕೆಯಲ್ಲಿ ಬಳಸುವ ಕಚ್ಛಾವಸ್ತುಗಳ ಬೆಲೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರವು ಅವುಗಳ ಬೆಲೆಗಳನ್ನು ನಿಗದಿಪಡಿಸಿದೆ” ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
200 ಮಿಲಿ ಬಾಟಲ್ ಹ್ಯಾಂಡ್ ಸ್ಯಾನಿಟೈಸರ್ಗಳ ಚಿಲ್ಲರೆ ಬೆಲೆಯನ್ನು 100 ರೂ.ಗೆ ನಿಗದಿಪಡಿಸಲಾಗಿದೆ ಮತ್ತು ಈ ಬೆಲೆ ಮೀರಬಾರದು ಎಂದು ಪಾಸ್ವಾನ್ ಹೇಳಿದ್ದಾರೆ. ಇತರ ಗಾತ್ರದ ಬಾಟಲಿಗಳಿಗೂ ಇದೇ ಪ್ರಮಾಣದಲ್ಲಿ ಬೆಲೆ ನಿಗದಿಪಡಿಸಲಾಗುವುದು ಮತ್ತು ಈ ಬೆಲೆಗಳು ಜೂನ್ 30 ರವರೆಗೆ ದೇಶಾದ್ಯಂತ ಅನ್ವಯವಾಗುತ್ತವೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ, ಸರ್ಕಾರವು ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಮುಂದಿನ 100 ದಿನಗಳವರೆಗೆ ಅಗತ್ಯ ಸರಕುಗಳೆಂದು ಘೋಷಿಸಿತು, ಏಕೆಂದರೆ ಇದು ಕೊರೋನವೈರಸ್ ಹರಡುವುದನ್ನು ತಡೆಗಟ್ಟುವ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪೂರೈಕೆಯನ್ನು ಹೆಚ್ಚಿಸಲು ಮತ್ತು ಈ ವಸ್ತುಗಳನ್ನು ಸಂಗ್ರಹಿಸುವುದನ್ನು ತಡೆಯುವ ಪ್ರಯತ್ನಗಳನ್ನು ಸರ್ಕಾರ ಚುರುಕುಗೊಳಿಸಿದೆ. ಶಸ್ತ್ರಚಿಕಿತ್ಸೆ ಮತ್ತು ರಕ್ಷಣಾತ್ಮಕ ಮುಖಗವಸುಗಳು, ಕೈ ಸ್ಯಾನಿಟೈಸರ್ಗಳು ಮತ್ತು ಕೈಗವಸುಗಳ ಬೆಲೆ ನಿಯಂತ್ರಣ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಸಹಾ ಬಳಸಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.