ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ನಾಲ್ವರಿಗೆ ಶುಕ್ರವಾರ ಬೆಳಿಗ್ಗೆ ಗಲ್ಲು ಶಿಕ್ಷೆಯನ್ನು ನೀಡಲು ತಿಹಾರ್ ಜೈಲಿನಲ್ಲಿ ಎಲ್ಲಾ ಸಿದ್ಧತೆಗಳು ನಡೆದಿದೆ. ಅಪರಾಧಿಗಳ ಎಲ್ಲಾ ಕಾನೂನು ದಾರಿಗಳು ಮುಚ್ಚಿ ಹೋಗಿದ್ದು, ರಾಷ್ಟ್ರಪತಿಗಳು ಕೂಡ ಇವರುಗಳ ಅರ್ಜಿಯನ್ನು ವಜಾ ಮಾಡಿದ್ದಾರೆ.
ವಿನಯ್, ಮುಖೇಶ್, ಅಕ್ಷಯ್, ಮತ್ತು ಪವನ್ ಎಂಬ ನಾಲ್ವರು ಅಪರಾಧಿಗಳನ್ನು 2012 ರ ಡಿಸೆಂಬರ್ 16 ರಂದು ನಿರ್ಭಯಾ ಕ್ರೂರ ಹತ್ಯೆ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಮಾರ್ಚ್ 20) ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಲಾಗುತ್ತಿದೆ. 6.30ರೊಳಗೆ ಎಲ್ಲಾ ಪ್ರಕ್ರಿಯೆ ಮುಗಿಯಲಿದೆ.
ಪವನ್ ಜಲ್ಲಾದ್ ಅವರು ಅಪರಾಧಿಗಳನ್ನು ನೇಣು ಕುಣಿಕೆಗೆ ಏರಿಸಲಿದ್ದಾರೆ. ಈಗಾಗಲೇ ಅವರು ತಿಹಾರ್ ಜೈಲಿಗೆ ಬಂದು ಪ್ರಕ್ರಿಯೆಯಂತೆ ವರದಿ ಮಾಡಿದ್ದಾರೆ. ಈಗಾಗಲೇ ಅವರು ಗಲ್ಲಿಗೇರಿಸುವ ಸ್ಥಳದ ಪರಿಶೀಲನೆಯನ್ನು ಮಾಡಿದ್ದಾರೆ. ಗಲ್ಲಿಗೇರಿಸಲು 10 ಹಗ್ಗಗಳನ್ನು ಬಕ್ಸರ್ ಮತ್ತು ಬಿಹಾರದಿಂದ ತರಿಸಲಾಗಿದೆ. ಜಲ್ಲದ್ ಅವರಿಗೆ ಅಪರಾಧಿಗಳನ್ನು ಗಲ್ಲಿಗೇರಿಸುವುದಕ್ಕೆ ರೂ.15 ಸಾವಿರಗಳನ್ನು ನೀಡಲಾಗುತ್ತದೆ.
ನಾಲ್ಕು ಮಂದಿಯನ್ನು ಒಟ್ಟಿಗೆ ಗಲ್ಲಿಗೇರಿಸುತ್ತಿರುವ ಇದೇ ಮೊದಲು. ಗಲ್ಲಿಗೇರಿಸುವ ಸಂದರ್ಭದಲ್ಲಿ ಜೈಲಿನ ಅಧೀಕ್ಷಕ ಮತ್ತು ಜೈಲಿನ ವೈದ್ಯರು ಉಪಸ್ಥಿತರಿರಲಿದ್ದಾರೆ. ಈ ವೇಳೆ ಅಪರಾಧಿಗಳಿಗೆ ಕೊನೆಯ ಇಚ್ಛೆಯನ್ನು ಹೇಳುವ ಅವಕಾಶ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.