ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಸಮುದಾಯ ಪಸರಿಸುವಿಕೆಯನ್ನು ಕಂಡಿಲ್ಲ ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ಸ್ಪಷ್ಟವಾಗಿ ತಿಳಿಸಿದೆ.
ಸಮುದಾಯ ಪಸರಣಕ್ಕೆ ಸಂಬಂಧಿಸಿದಂತೆ ಒಟ್ಟು 826 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಇದೆಲ್ಲವೂ ಋಣಾತ್ಮಕವಾಗಿ ಬಂದಿದೆ. ಹೀಗಾಗಿ ಫಲಿತಾಂಶಗಳು ಭಾರತದಲ್ಲಿ ಪ್ರಸ್ತುತ COVID-19 ಸಮುದಾಯ ಪ್ರಸರಣದ ಅಪಾಯವಿಲ್ಲ ಎಂಬುದನ್ನು ಪ್ರದಿಪಾದಿಸಿವೆ ಎಂದು ಐಸಿಎಂಆರ್ ಹೇಳಿದೆ.
ಸಮುದಾಯ ಪ್ರಸರಣ ಕಂಡುಬಂದಲ್ಲಿ ಮತ್ತು ಭಾರತವು ಕೊರೋನವೈರಸ್ನ 3 ನೇ ಹಂತಕ್ಕೆ ಪ್ರವೇಶಿಸಿದರೆ, ಐಸಿಎಂಆರ್ ಪರೀಕ್ಷಾ ಕಾರ್ಯತಂತ್ರದಲ್ಲಿ ಬದಲಾವಣೆಗಳನ್ನು ತರುತ್ತದೆ ಎಂದು ಐಸಿಎಂಆರ್ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ, ಐಸಿಎಂಆರ್ ತೀವ್ರವಾದ ಉಸಿರಾಟದ ಕಾಯಿಲೆಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾದವರ ಮಾದರಿಗಳನ್ನು ಸಂಗ್ರಹಿಸಲು ಪ್ರಾರಂಭಿಸಿತ್ತು. ಈ ಮಾದರಿಗಳನ್ನು ಐಸಿಎಂಆರ್ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳ ನೆಟ್ವರ್ಕ್ಗೆ ಕಳುಹಿಸಲಾಗಿದೆ.
ಭಾರತವು ಗುರುವಾರ 169 ಕೊರೋನವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಈವರೆಗೆ ವಿಶ್ವದಾದ್ಯಂತ 8,900 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿರುವ ಮಾರಕ ವೈರಲ್ ಕಾಯಿಲೆಯಿಂದ ಭಾರತದಲ್ಲಿ ಮೂರು ಜನರು ಸಾವನ್ನಪ್ಪಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.