ನವದೆಹಲಿ: ಕೊರೋನವೈರಸ್ ಸವಾಲನ್ನು ಎದುರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಹಲವಾರು ಜನರು ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಸೂಚಿಸುತ್ತಿದ್ದಾರೆಂಬುದನ್ನು ಉಲ್ಲೇಖಿಸಿರುವ ಮೋದಿ, ನೆಟಿಜನ್ಗಳು ತಮ್ಮ ಆಲೋಚನೆಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಬೇಕೆಂದು ಒತ್ತಾಯಿಸಿದರು.
“ಆರೋಗ್ಯಕರ ಭೂಮಿಗಾಗಿ ನವೀನತೆಯನ್ನು ಬಳಸಿಕೊಳ್ಳೋಣ. COVID-19 ಗಾಗಿ ತಂತ್ರಜ್ಞಾನ-ಚಾಲಿತ ಪರಿಹಾರಗಳನ್ನು ಬಹಳಷ್ಟು ಜನರು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು Mygov.in ನಲ್ಲಿ ಹಂಚಿಕೊಳ್ಳಲು ನಾನು ಅವರನ್ನು ಒತ್ತಾಯಿಸುತ್ತೇನೆ. ಈ ಪ್ರಯತ್ನಗಳು ಅನೇಕರಿಗೆ ಸಹಾಯ ಮಾಡುತ್ತವೆ. #ಇಂಡಿಯಾಫೈಟ್ಸ್ ಕೊರೊನಾ” ಎಂದು ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
Harnessing innovation for a healthier planet.
A lot of people have been sharing technology-driven solutions for COVID-19.
I would urge them to share them on @mygovindia. These efforts can help many. #IndiaFightsCorona https://t.co/qw79Kjtkv2
— Narendra Modi (@narendramodi) March 16, 2020
ಕೋವಿಡ್ -19 ಹರಡುವುದನ್ನು ತಡೆಯಲು ಸರ್ಕಾರ ಎಲ್ಲಾ ಪ್ರಯತ್ನವನ್ನು ಮಾಡುತ್ತಿದೆ, ಆದರು ಸೋಮವಾರದವರೆಗೆ 114 ಪ್ರಕರಣಗಳು ವರದಿಯಾಗಿದೆ ಮತ್ತು ದೃಢಪಡಿಸಿದ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಏರುತ್ತಿದೆ.
ಕೋವಿಡ್ -19 ಅನ್ನು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವೆಂದು ಘೋಷಿಸಿದ್ದು, ವಿಶ್ವದಾದ್ಯಂತ ಸುಮಾರು 100 ದೇಶಗಳಲ್ಲಿ 1,70,000 ಪ್ರಕರಣಗಳು ವರದಿಯಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.