ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಂಬಯಿ ಮೂಲದ ಆನಿಮೇಷನ್ ಕಲಾವಿದರೊಬ್ಬರು ಮುಂಬೈನ ಅಂಧೇರಿಯಲ್ಲಿ ಶಿವಾಜಿ ಅವರ ಮೊಸಾಯಿಕ್ ಭಾವಚಿತ್ರವನ್ನು ರಚಿಸಿ ವಿಶ್ವ ದಾಖಲೆ ಮಾಡಿದ್ದಾರೆ.
ಖಾಸಗಿ ಕಂಪನಿಯಲ್ಲಿ ಹೈಟೆಕ್ ಆನಿಮೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್ ದಿನೇಶ್ ಕಾಂಬ್ಳೆ 10 ದಿನಗಳಲ್ಲಿ 10 ವಿಭಿನ್ನ ಮಾದರಿಗಳನ್ನು ಒಳಗೊಂಡ ಆರು ವಿಭಿನ್ನ ಬಣ್ಣಗಳ 46,080 ಪ್ಲಾಸ್ಟಿಕ್ ಬಿಟ್ಸ್ಗಳನ್ನು ಬಳಸಿ ಶಿವಾಜಿ ಭಾವಚಿತ್ರವನ್ನು ರಚಿಸಿದ್ದಾರೆ.
“ನಾನು ಚತ್ರಪತಿ ಶಿವಾಜಿ ಮಹಾರಾಜ್ ಅವರ ಭಾವಚಿತ್ರವನ್ನು ಮಾಡಿದ್ದೇನೆ. ಇದನ್ನು ತಯಾರಿಸಲು ನಾನು 46,080 ಪ್ಲಾಸ್ಟಿಕ್ ಬಿಟ್ಸ್ಗಳನ್ನು ಬಳಸಿದ್ದೇನೆ. ಭಾರತದಲ್ಲಿ, ಪ್ಲಾಸ್ಟಿಕ್ ಮೇಲೆ ನಿಷೇಧವಿದೆ ಆದರೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಪ್ಲಾಸ್ಟಿಕ್ ಬಳಸಿ ನಮಗೆ ಸಾಕಷ್ಟನ್ನು ಮಾಡಲು ಸಾಧ್ಯವಿದೆ” ಎಂದು ಭಾವಚಿತ್ರದ ಹಿಂದಿನ ಪ್ರೇರಣೆಯ ಬಗ್ಗೆ ಕೇಳಿದಾಗ ಕಾಂಬ್ಳೆ ಹೇಳುತ್ತಾರೆ.
ಪ್ಲಾಸ್ಟಿಕ್ ಬಳಸಿ ಒಳ್ಳೆಯ ಮತ್ತು ಪ್ರಸ್ತುತಪಡಿಸುವಂತಹ ವಸ್ತುವನ್ನು ಮಾಡುವ ಬಗ್ಗೆ ಯೋಚಿಸಿದ್ದೇನೆ ಎಂದು ಕಾಂಬ್ಲೆ ಹೇಳಿದ್ದಾರೆ.
“ನಾನು ಉದ್ಯೋಗಿಯಾಗಿದ್ದೇನೆ, ಹಾಗಾಗಿ ನನ್ನ ರಾತ್ರಿಗಳನ್ನು ಭಾವಚಿತ್ರ ತಯಾರಿಸಲು ಕಳೆಯಬೇಕಾಯಿತು. ಭಾವಚಿತ್ರವನ್ನು ಪೂರ್ಣಗೊಳಿಸಲು ನನಗೆ ಸುಮಾರು 10 ದಿನಗಳು ಬೇಕಾಯಿತು. ನಾನು ಭುವನೇಶ್ವರದಿಂದ ಕಚ್ಚಾ ವಸ್ತುಗಳನ್ನು ಖರೀದಿಸಿದೆ ಮತ್ತು ಆರು ವಿಭಿನ್ನ ಬಣ್ಣಗಳನ್ನು ಬಳಸಿ ಭಾವಚಿತ್ರ ರಚಿಸಿದೆ ”ಎಂದು ಅವರು ಹೇಳುತ್ತಾರೆ.
“ಈ ಭಾವಚಿತ್ರವನ್ನು ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದಲ್ಲಿ ನೋಂದಾಯಿಸಲಾಗಿದೆ. ಇದು ನನ್ನ ಮೊದಲ ವಿಶ್ವ ದಾಖಲೆ. ಭವಿಷ್ಯದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಹೆಚ್ಚಿನದನ್ನು ಮಾಡಲು ನಾನು ಬಯಸುತ್ತೇನೆ ಏಕೆಂದರೆ ಯುವ ಪೀಳಿಗೆ ಅವರ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಸ್ಫೂರ್ತಿ ಪಡೆಯಬೇಕು ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.