ನವದೆಹಲಿ: ಕೊರೊನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ಎನ್ 95 ಸೇರಿದಂತೆ ಮುಖಗವಸುಗಳನ್ನು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ‘ಅಗತ್ಯ ಸರಕುಗಳು’ ಎಂದು ಕೇಂದ್ರ ಸರ್ಕಾರ ಶುಕ್ರವಾರ ಘೋಷಿಸಿದೆ. ಇವುಗಳ ಕೊರತೆ ಮತ್ತು ಕಾಳ ದಂಧೆ ಆರಂಭವಾಗಿರುವ ಹಿನ್ನಲೆಯಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ.
ಈ ವಸ್ತುಗಳು ಜೂನ್ ಅಂತ್ಯದವರೆಗೆ ಅಗತ್ಯ ಸರಕುಗಳ ವಿಭಾಗದಲ್ಲಿ ಉಳಿಯಲಿವೆ. ಸಮಂಜಸವಾದ ಬೆಲೆಯಲ್ಲಿ ಈ ವಸ್ತುಗಳ ಲಭ್ಯತೆಯನ್ನು ಖಾತರಿಪಡಿಸುವುದು ಮತ್ತು ಕಾಳ ಮಾರುಕಟ್ಟೆಯನ್ನು ತಡೆಯುವ ಉದ್ದೇಶದಿಂದ ಈ ಘೋಷಣೆಯನ್ನು ಮಾಡಲಾಗಿದೆ.
2020 ರ ಜೂನ್ 30 ರವರೆಗೆ ಮುಖಗವಸುಗಳನ್ನು (2 ಪ್ಲೈ ಮತ್ತು 3 ಪ್ಲೈ ಸರ್ಜಿಕಲ್ ಮಾಸ್ಕ್, ಎನ್ 95 ಮಾಸ್ಕ್) ಮತ್ತು ಹ್ಯಾಂಡ್ ಸ್ಯಾಂಟೈಸರ್ ಗಳನ್ನು ಅಗತ್ಯ ಸರಕುಗಳಾಗಿ ಘೋಷಿಸಲು ಅಗತ್ಯ ಸರಕುಗಳ ಕಾಯ್ದೆಯಡಿ ಸರ್ಕಾರ ಆದೇಶ ಹೊರಡಿಸಿದೆ.
ಉತ್ಪಾದನೆ, ಗುಣಮಟ್ಟ, ಮುಖಗವಸುಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳ ವಿತರಣೆಯನ್ನು ನಿಯಂತ್ರಿಸಲು ಮತ್ತು ಈ ವಸ್ತುಗಳ ಮಾರಾಟ ಮತ್ತು ಲಭ್ಯತೆಯನ್ನು ಸುಗಮಗೊಳಿಸಲು ಮತ್ತು ಉಹಾಪೋಹಕಾರರ ವಿರುದ್ಧ ಕಾರ್ಯಾಚರಣೆ ನಡೆಸಲು ಈ ನಿರ್ಧಾರವು ಕೇಂದ್ರಕ್ಕೆ ಅಧಿಕಾರ ನೀಡಿದೆ.
ಹೆಚ್ಚು ಬೆಲೆಗೆ ಈ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ರವಾನಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.