ನವದೆಹಲಿ: ಕೊರೋನವೈರಸ್ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ SAARC ದೇಶಗಳು ಬಲಿಷ್ಠ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಬಗ್ಗೆ ನಾಯಕರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚರ್ಚಿಸಬೇಕು, ನಾಗರಿಕರನ್ನು ಆರೋಗ್ಯವಾಗಿಡಲು ಸಾರ್ಕ್ ರಾಷ್ಟ್ರಗಳು ಒಟ್ಟಾಗಿ ಜಗತ್ತಿಗೆ ಒಂದು ಉದಾಹರಣೆಯನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.
ಗಮನಾರ್ಹ ಸಂಖ್ಯೆಯ ಜಾಗತಿಕ ಜನಸಂಖ್ಯೆಯನ್ನು ಹೊಂದಿರುವ ದಕ್ಷಿಣ ಏಷ್ಯಾವು ಜನರು ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಯಾವುದೇ ಅವಕಾಶವನ್ನು ಕೈಚೆಲ್ಲಬಾರದು ಎಂದು ಸರಣಿ ಟ್ವೀಟ್ಗಳಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ನಮ್ಮ ಭೂಮಿಯು COVID-19 ವಿರುದ್ಧ ಹೋರಾಡುತ್ತಿದೆ. ಎಲ್ಲಾ ಹಂತಗಳಲ್ಲೂ, ಸರ್ಕಾರಗಳು ಮತ್ತು ಜನರು ಇದನ್ನು ಎದುರಿಸಲು ತಮ್ಮ ಮಟ್ಟದಲ್ಲಿ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ.
ಕೊರೋನವೈರಸ್ ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಲು ತಮ್ಮ ಸರ್ಕಾರದ ಯಾವುದೇ ಮಂತ್ರಿಗಳು ವಿದೇಶಕ್ಕೆ ಹೋಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಟ್ವೀಟ್ ಮಾಡಿದ್ದರು. ಅನಗತ್ಯ ಪ್ರಯಾಣ ಮತ್ತು ದೊಡ್ಡ ಕೂಟಗಳನ್ನು ತಪ್ಪಿಸಬೇಕು ಎಂದು ಅವರು ನಾಗರಿಕರನ್ನು ಕೋರಿದ್ದರು. ಅಲ್ಲದೇ, ಕೊರೋನವೈರಸ್ ಬಗ್ಗೆ ಆತಂಕ ಬೇಡ, ಮುಂಜಾಗ್ರತೆ ಕ್ರಮ ಕೈಗೊಳ್ಳಿ ಎಂದಿದ್ದಾರೆ.
Our planet is battling the COVID-19 Novel Coronavirus. At various levels, governments and people are trying their best to combat it.
South Asia, which is home to a significant number of the global population should leave no stone unturned to ensure our people are healthy.
— Narendra Modi (@narendramodi) March 13, 2020
I would like to propose that the leadership of SAARC nations chalk out a strong strategy to fight Coronavirus.
We could discuss, via video conferencing, ways to keep our citizens healthy.
Together, we can set an example to the world, and contribute to a healthier planet.
— Narendra Modi (@narendramodi) March 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.