ನವದೆಹಲಿ: ಶೀಘ್ರದಲ್ಲೇ ಹೆಚ್ಚಿನ ಖಾಸಗಿ ರೈಲುಗಳು ಕಾರ್ಯಾಚರಣೆಯನ್ನು ಆರಂಭಿಸಲಿವೆ. ಖಾಸಗಿ ಆಪರೇಟರ್ಗಳ ಮೂಲಕ ಪ್ಯಾಸೇಂಜರ್ ರೈಲು ಸೇವೆಯನ್ನು ಕಾರ್ಯಾರಂಭ ಮಾಡುವ ಪ್ರಕ್ರಿಯೆಗಳು ಈಗಾಗಲೇ ಚಾಲನೆಗೊಂಡಿವೆ. ಸುಮಾರು 100 ರೈಲ್ವೆ ನೆಟ್ವರ್ಕ್ಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಖಾಸಗಿ ರೈಲು ಆರಂಭಿಸಲು ನೀತಿ ಆಯೋಗ ಮತ್ತು ಭಾರತೀಯ ರೈಲ್ವೆ ವೆಬ್ಸೈಟ್ಗಳಲ್ಲಿ ಸೂಚಕ ಪಟ್ಟಿಗಳನ್ನು ಅಪ್ಲೋಡ್ ಮಾಡಲಾಗಿದೆ.
ಸೂಚಕ ಪಟ್ಟಿಯೊಂದಿಗೆ ಆಸಕ್ತರ ಪ್ರತಿಕ್ರಿಯೆಗಳನ್ನು ಪಡೆಯಲು ಡ್ರಾಫ್ಟ್ ರಿಕ್ವೆಸ್ಟ್ ಫಾರ್ ಕ್ವಾಲಿಫಿಕೇಶನ್ (ಆರ್ಎಫ್ಕ್ಯೂ) ಜೊತೆಗೆ ಕರಡು ರಿಯಾಯಿತಿ ಒಪ್ಪಂದದ ಪಟ್ಟಿಯನ್ನು ಅಪ್ಲೋಡ್ ಮಾಡಲಾಗಿದೆ.
ಈ ಬಗ್ಗೆ ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು, ನವದೆಹಲಿ-ಲಕ್ನೋ ವಿಭಾಗದಲ್ಲಿ 4 ಅಕ್ಟೋಬರ್ 2019 ರಿಂದ ತೇಜಸ್ ಎಕ್ಸ್ಪ್ರೆಸ್ ರೈಲು ಅನ್ನು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಕಾರ್ಯಾಚರಿಸುತ್ತಿದೆ. ಇದರಿಂದ ನಿಗಮವು 4 ಅಕ್ಟೋಬರ್ 2019 ರಿಂದ 31 ಅಕ್ಟೋಬರ್ 2019 ರ ಅವಧಿಯಲ್ಲಿ ಸುಮಾರು 7.73 ಲಕ್ಷ ರೂಪಾಯಿ ಲಾಭವನ್ನು ಪಡೆದುಕೊಂಡಿದೆ” ಎಂದಿದ್ದಾರೆ.
ರೈಲ್ವೆ ಸಚಿವರ ಪ್ರಕಾರ, ಭಾರತೀಯ ರೈಲ್ವೆಯು ರೈಲ್ವೆ ಪ್ರಯಾಣಿಕರ ಅಗತ್ಯವನ್ನು ಪೂರೈಸಲು ವಿವಿಧ ರೀತಿಯ ರೈಲು ಸೇವೆಗಳನ್ನು ಒದಗಿಸುತ್ತಿದೆ. ರೈಲು ಸೇವೆಗಳಾದ ವಂದೇ ಭಾರತ್ ಎಕ್ಸ್ಪ್ರೆಸ್, ಘಾಟಿಮನ್ ಎಕ್ಸ್ಪ್ರೆಸ್ ಇತ್ಯಾದಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ಅವು ಪ್ರೀಮಿಯಂ ವಿಭಾಗದಲ್ಲಿ ಜನಪ್ರಿಯವಾಗಿವೆ. ರೈಲು ಸೇವೆಗಳಾದ ಶತಾಬ್ದಿ ಎಕ್ಸ್ಪ್ರೆಸ್, ರಾಜಧಾನಿ ಎಕ್ಸ್ಪ್ರೆಸ್, ಡುರೊಂಟೊ ಎಕ್ಸ್ಪ್ರೆಸ್, ಮೊದಲಾದವು ಪ್ರಯಾಣಿಕರಿಗೆ ಸಂಪೂರ್ಣ ಕಾಯ್ದಿರಿಸಿದ ವಸತಿ ಸೌಕರ್ಯವನ್ನು ಒದಗಿಸುತ್ತದೆ ಮತ್ತು ದೂರದ ಮತ್ತು ಅಂತರ ನಗರ ಪ್ರಯಾಣಿಕರಿಗೆ ಇದು ಹೆಚ್ಚು ಅನುಕೂಲವಾಗಿದೆ. ಅಲ್ಲದೇ, ಕಾಯ್ದಿರಿಸದ ಟಿಕೆಟ್ಗಳಲ್ಲಿ ಪ್ರಯಾಣಿಸುವವರು ಸೇರಿದಂತೆ ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಅಂತ್ಯೋದಯ ರೈಲು ಮತ್ತು ಇತರ ಮೇಲ್ ಎಕ್ಸ್ಪ್ರೆಸ್ ರೈಲುಗಳನ್ನು ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.