ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನಂತರ ದೆಹಲಿಯಲ್ಲಿ ನಡೆದ ಹಿಂಸಾಚಾರ, ದಂಗೆಯ ಕರಾಳತೆಯ ಚಿತ್ರಣ ಬಿಡಿಸಿದಷ್ಟೂ ಮುಗಿಯದ ಕಗ್ಗಂಟಾಗುತ್ತಿದೆ. ದಿನಕ್ಕೊಂದು ಚಿತ್ರ ವಿಚಿತ್ರ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದ್ದು, ಇದೀಗ ಈ ಘಟನೆಯ ಹಿಂದೆ ಉಗ್ರ ಹಫೀಜ್ ಸಯೀದ್ನಿಗೆ ಸಂಬಂಧಿಸಿದ ಇಂಡೋನೇಷಿಯಾದ ಎನ್ಜಿಒ ಒಂದು ಹಣಕಾಸಿನ ನೆರವು ನೀಡಿರುವ ಮಾಹಿತಿಯನ್ನು ಮಾಧ್ಯಮವೊಂದು ಬಹಿರಂಗಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ನಾಯಕ ತಾಹಿರ್ ಹುಸೇನ್, ಪಿಎಫ್ಐ ಸಂಘಟನೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವಾಗಲೇ, ಇಂತಹ ಒಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಉಗ್ರ ಹಫೀಜ್ ಸಯೀದ್ನಿಗೆ ಸಂಬಂಧಿಸಿದ ಎಸಿಟಿ ಎಂಬ ಮುಸ್ಲಿಂ ಸಂಘಟನೆಯೊಂದು, ಭಾರತದ ಮತ್ತೊಂದು ಸಂಘಟನೆಯ ಮೂಲಕ ಸುಮಾರು 25 ಲಕ್ಷ ರೂ. ಗಳನ್ನು ದೆಹಲಿ ಹೊತ್ತುರಿಯುವಂತೆ ಮಾಡುವ ಸಲುವಾಗಿ ನೀಡಿತ್ತು ಎಂದು ತನಿಖಾ ವರದಿಯಿಂದ ಬಹಿರಂಗವಾಗಿರುವುದಾಗಿ ಈ ಮಾಧ್ಯಮ ತಿಳಿಸಿದೆ.
ಎಸಿಟಿ ಬಾಂಗ್ಲಾದೇಶದಲ್ಲಿ ರೊಹಿಂಗ್ಯಾ ಚಟುವಟಿಕೆಗಳಿಗೂ ಸಹಕಾರ ನೀಡಿದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಶಹೀನ್ಬಾಗ್ನಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ, ಟ್ರಂಪ್ ಭೇಟಿ ಬೆನ್ನಲ್ಲಿಯೇ ಉಗ್ರ ಸ್ವರೂಪ ಪಡೆದುಕೊಂಡಿತ್ತು. ಪೊಲೀಸ್ ಅಧಿಕಾರಿಗಳೂ ಸೇರಿ ಸುಮಾರು 50 ಮಂದಿ ಈ ಘಟನೆಯಲ್ಲಿ ಬಲಿಯಾಗಿದ್ದರು. ಸಾರ್ವಜನಿಕ ಅಸ್ತಿಪಾಸ್ತಿ, ಖಾಸಗಿ ಆಸ್ತಿಪಾಸ್ತಿಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.