ಮುಂಬೈ : ಪಾಕಿಸ್ಥಾನದಲ್ಲಿ ತರಬೇತಿ ಪಡೆದು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಅಬು ಹಮ್ಜಾ ಅಲಿಯಾಸ್ ಅಬು ಜುಂಡಾಲ್ ಮುಂಬೈನ ಶಾಸಕರ ಹಾಸ್ಟೆಲ್ ಕೋಣೆಯೊಂದರಲ್ಲಿ ತಂಗಿದ್ದನು. ಈ ಕೋಣೆ ಎನ್ಸಿಪಿ ಪಕ್ಷದ ಫೌಜಿಯಾ ಖಾನ್ ಅವರಿಗೆ ಸೇರಿದ್ದಾಗಿತ್ತು. ಈಗ ಇದೇ ಫೌಜಿಯಾ ಖಾನ್ ಎನ್ಸಿಪಿ ಪಕ್ಷದ ಅಭ್ಯರ್ಥ್ಯಿಯಾಗಿ ರಾಜ್ಯಸಭಾ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.
ಅಬು ಹಮ್ಜಾ 2006 ರಲ್ಲಿ ಮುಂಬೈನ ಶಾಸಕರ ಹಾಸ್ಟೆಲಿನಲ್ಲಿ ಫೌಜಿಯಾ ಖಾನ್ಗೆ ಸೇರಿದ ಕೋಣೆಯಲ್ಲಿ ತಂಗಿದ್ದನು ಎಂದು ತನಿಖಾ ಸಂಸ್ಥೆಗಳು 2012ರಲ್ಲಿ ಬಹಿರಂಗಪಡಿಸಿದ್ದವು. ಆದರೆ ಹಾಸ್ಟೇಲಿನಲ್ಲಿ ಆತ ತಂಗಿದ್ದ ವೇಳೆ, ಅಂದರೆ 2006ರಲ್ಲಿ ಅಬು ಹಮ್ಜಾ ವಿರುದ್ಧ ಭಯೋತ್ಪಾದನೆಯ ಯಾವುದೇ ಪ್ರಕರಣಗಳಿರಲಿಲ್ಲ ಎಂದು ಎನ್ಸಿಪಿ ನಾಯಕಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ! ಯಾರದೇ ಪೂರ್ವಾಪರಗಳನ್ನು ಪರಿಶೀಲಿಸದೆ ಶಾಸಕರ ಹಾಸ್ಟೆಲ್ ನಂತಹ ಕಟ್ಟಡದಲ್ಲಿನ ತಮ್ಮ ಕೋಣೆಯಲ್ಲಿ ಉಳಿಯಲು ಹೇಗೆ ಅನುವು ಮಾಡಿಕೊಟ್ಟರು ಎಂಬುದಕ್ಕೆ ಉತ್ತರ ನೀಡಲು ಈ ನಾಯಕಿ ಸಿದ್ಧರಿರರಿಲ್ಲ.
ಶಾಸಕರ ಹಾಸ್ಟೆಲ್ನಂತಹ ಸುರಕ್ಷಿತ ಸ್ಥಳದಲ್ಲಿ ಉಳಿಯಲು ಅನುಮತಿಸಲಾದ ವ್ಯಕ್ತಿಯ ಸಂಪೂರ್ಣ ರುಜುವಾತುಗಳನ್ನು ತಿಳಿದುಕೊಳ್ಳುವುದು ಒಂದು ಕಾರ್ಯವಿಧಾನವಾಗಿದೆ. ಪಾಕಿಸ್ಥಾನದಲ್ಲಿ ತರಬೇತಿ ಪಡೆದ ಮತ್ತು ಸಂಶಯಾಸ್ಪದ ಪೂರ್ವವರ್ತಿಗಳನ್ನು ಹೊಂದಿದ್ದ ಭಯೋತ್ಪಾದಕನಿಗೆ ಫೌಜಿಯಾ ಖಾನ್ ಹಾಸ್ಟೆಲಿನಲ್ಲಿ ಉಳಿಯಲು ಅವಕಾಶ ನೀಡಿರುವುದು ಆಶ್ಚರ್ಯಕರವಾಗಿದೆ.
ಇಂತಹ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಹೊರಟಿರುವ ಎನ್.ಸಿ.ಪಿ. ಪಕ್ಷದ ನಡೆಗೆ ಸರ್ವತ್ರ ಖಂಡನೆ ವ್ಯಕ್ತವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.