ನವದೆಹಲಿ: ಜನವರಿಯಲ್ಲಿ ಕೇಂದ್ರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಒಂದು ತಿಂಗಳ ನಂತರ, ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊಡೊಲ್ಯಾಂಡ್ (ಎನ್ಡಿಎಫ್ಬಿ) ಬಂಡುಕೋರ ಸಂಘಟನೆಯ ಎಲ್ಲಾ ನಾಲ್ಕು ಬಣಗಳು ಈ ವಾರ ತಮ್ಮನ್ನು ವಿಸರ್ಜಿಸಿಕೊಂಡಿವೆ ಎಂದು ಮೂಲಗಳು ವರದಿ ಮಾಡಿವೆ.
ಅಸ್ಸಾಂ ಮತ್ತು ಇಡೀ ಈಶಾನ್ಯದಲ್ಲಿನ ಅಪಾಯಕಾರಿ ಬಂಡುಕೋರ ಸಂಘಟನೆಗಳಲ್ಲಿ ಒಂದಾದ ಎನ್ಡಿಎಫ್ಬಿ 1986ರ ಅಕ್ಟೋಬರ್ 3 ರಂದು ಬೋಡೋ ಸೆಕ್ಯುರಿಟಿ ಫೋರ್ಸ್ ಹೆಸರಿನಲ್ಲಿ ಬೋಡೋಗಳಿಗಾಗಿ ಪ್ರತ್ಯೇಕ ಬೋಡೋಲ್ಯಾಂಡ್ ರಾಜ್ಯವನ್ನು ಸೃಷ್ಟಿಸುವ ಉದ್ದೇಶದಿಂದ ರಚಿಸಲ್ಪಟ್ಟಿತು. ಇದು ಅಸ್ಸಾಂನ ಅತಿದೊಡ್ಡ ಬುಡಕಟ್ಟು ಜನಾಂಗಗಳಲ್ಲಿ ಒಂದಾಗಿದೆ. ಬೋಡೋಗಳು ಅಸ್ಸಾಂನ ಅತೀದೊಡ್ಡ ಬುಡಕಟ್ಟು ಸಮುದಾಯವಾಗಿದೆ. ಇವರಿಗಾಗಿ ಸಶಸ್ತ್ರ ಚಳುವಳಿ ಮೂಲಕ ಪ್ರತ್ಯೇಕ ರಾಜ್ಯವನ್ನು ಸೃಷ್ಟಿ ಮಾಡುವುದು ಈ ಸಂಘಟನೆಯ ಉದ್ದೇಶವಾಗಿತ್ತು.
1994 ರಲ್ಲಿ, ಈ ಸಂಘಟನೆಯ ಹೆಸರನ್ನು ಎನ್ಡಿಎಫ್ಬಿ ಎಂದು ಮರುನಾಮಕರಣ ಮಾಡಲಾಯಿತು. ಈ ಉಗ್ರ ಸಂಘಟನೆಯು ಬಳಿಕ ನಾಲ್ಕು ವಿಭಿನ್ನ ಬಣಗಳಾಗಿ ವಿಭಜನೆಯಾಯಿತು – ಬಿ ಸೌರೈಗ್ವ್ರಾ, ಗೋವಿಂದ ಬಸುಮಾಟರಿ, ರಂಜನ್ ಡೈಮರಿ ಮತ್ತು ಧೀರೇಂದ್ರ ಬೊರೊ ನೇತೃತ್ವದಲ್ಲಿ ಈ ಬಣಗಳು ಕಾರ್ಯಾಚರಿಸಿದವು.
ಎಲ್ಲಾ ನಾಲ್ಕು ಬಣಗಳು ಜನವರಿಯಲ್ಲಿ ಕೇಂದ್ರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದವು. ಅದೇ ತಿಂಗಳಲ್ಲಿ 1,600 ಕ್ಕೂ ಹೆಚ್ಚು ಇದರ ಕಾರ್ಯಕರ್ತರು ತಮ್ಮ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು.
ವರದಿಯ ಪ್ರಕಾರ, ಕಳೆದ ಸೋಮವಾರ ಅಸ್ಸಾಂನ ರಾಜ್ಯದ ಉದಲ್ಗುರಿ ಜಿಲ್ಲೆಯ ಸೋನೈನಲ್ಲಿ ನಡೆದ ಶಿಬಿರದಲ್ಲಿ ಸೈರೈಗ್ವ್ರಾ, ಡೈಮರಿ ಮತ್ತು ಬೊರೊ ನೇತೃತ್ವದ ಮೂರು ಬಣಗಳು ಜಂಟಿ ವಿಸರ್ಜನೆ ಸಮಾರಂಭವನ್ನು ಆಯೋಜಿಸಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.