ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ, ಭಾರತವು ಜಗತ್ತಿನ 23 ನೇ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಲ್ಲದೆ, 2015 ರಿಂದೀಚೆಗೆ ತನ್ನ ಒಟ್ಟಾರೆ ಶಸ್ತ್ರಾಸ್ತ್ರಗಳ ಆಮದನ್ನು ಶೇಕಡಾ 32 ರಷ್ಟು ಇಳಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ.
ಭಾರತೀಯ ಶಸ್ತ್ರಾಸ್ತ್ರ ರಫ್ತಿನ ಹೆಚ್ಚಿನ ಪಾಲನ್ನು ಆಮದು ಮಾಡಿಕೊಳ್ಳುವ ರಾಷ್ಟ್ರವೆಂದರೆ ಮಯನ್ಮಾರ್, ಇದು ಶೇ. 46 ರಷ್ಟು ಭಾರತದ ರಫ್ತನ್ನು ಆಮದು ಮಾಡಿಕೊಳ್ಳುತ್ತದೆ, ಶ್ರೀಲಂಕಾವು ಶೇ. 25 ರಷ್ಟು ಪಾಲನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಮಾರಿಷಸ್ ಶೇ. 14 ರಷ್ಟು ಪಾಲನ್ನು ಆಮದು ಮಾಡಿಕೊಳ್ಳುತ್ತದೆ.
ಈ ಸಾಧನೆಯು ಭಾರತ ಸರ್ಕಾರದ ಮಹತ್ವದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಪ್ರಮುಖ ಉತ್ತೇಜನ ನೀಡಿದೆ. ಹಿಂದೆ ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರನಾಗಿತ್ತು, ಇದೀಗ ಭಾರತವು ತನ್ನ ಶಸ್ತ್ರಾಸ್ತ್ರ ಆಮದನ್ನು ಕಡಿಮೆ ಮಾಡಿ ಎರಡನೇ ಸ್ಥಾನಕ್ಕೆ ಬಂದಿದೆ. ಮೊದಲ ಸ್ಥಾನವನ್ನು ಈಗ ಸೌದಿ ಅರೇಬಿಯಾ (ಕೆಎಸ್ಎ) ಪಡೆದುಕೊಂಡಿದೆ.
ಕಳೆದ ಐದು ವರ್ಷಗಳಲ್ಲಿ ಯುಎಸ್ನಿಂದ ಭಾರತದ ಆಮದು ಭಾರಿ ಕುಸಿತ ಕಂಡಿದೆ ಎಂಬುದು ಸಹ ಗಮನಾರ್ಹ. 2010-14ರಲ್ಲಿನ ಅಂಕಿ-ಅಂಶಕ್ಕೆ ಹೋಲಿಸಿದರೆ 2015-19ರಲ್ಲಿನ ಅಂಕಿ ಅಂಶವು 51 ಶೇಕಡಾ ಕಡಿಮೆಯಾಗಿದೆ.
ಅಲ್ಲದೇ, ದೇಶದ ಒಟ್ಟು ಆಮದುಗಳಲ್ಲಿ ರಷ್ಯಾದ ಪಾಲು ಶೇಕಡಾ 56 ರಷ್ಟಿದೆ. ಇಸ್ರೇಲ್ ಮತ್ತು ಫ್ರಾನ್ಸ್ ಕ್ರಮವಾಗಿ ಶೇ.14 ಮತ್ತು ಶೇ.12ರಷ್ಟು ಪಾಲನ್ನು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.