ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಜಾಲತಾಣ ಖಾತೆಗಳು ಸಂಪೂರ್ಣವಾಗಿ ಮಹಿಳಾ ಸಾಧಕಿಯರ ಯಶೋಗಾಥೆಗಳಿಂದ ತುಂಬಿ ಹೋಗಿತ್ತು. 7 ಮಂದಿ ಮಹಿಳಾ ಸಾಧಕಿಯರು ತಮ್ಮ ಸಾಧನೆಯ ಪಯಣವನ್ನು ಮೋದಿಯವರ ಸಾಮಾಜಿಕ ಖಾತೆಗಳ ಮೂಲಕ ದೇಶಕ್ಕೆ ವಿವರಿಸಿದರು. ಮೋದಿಯವರ ಟ್ವಿಟರ್, ಇನ್ಸ್ಟಾಗ್ರಾಂ, ಫೇಸ್ಬುಕ್ ಖಾತೆಗಳನ್ನು ನಿನ್ನೆ ಈ ಮಹಿಳೆಯರಿಗಾಗಿ ಮೀಸಲಿಡಲಾಗಿತ್ತು.
ಸಾಂಪ್ರದಾಯಿಕ ಕರಕುಶಲ ಮತ್ತು ಕೃಷಿ, ಹಸಿವು, ನೈರ್ಮಲ್ಯ, ನೀರಿನ ಸಂರಕ್ಷಣೆ, ಅಂಗವೈಕಲ್ಯ ಮತ್ತು ಸೇರ್ಪಡೆ ಮತ್ತು ಆರ್ಥಿಕ ಸಬಲೀಕರಣದಂತಹ ವೈವಿಧ್ಯಮಯ ವಿಷಯಗಳ ಬಗ್ಗೆ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ವ್ಯಕ್ತಪಡಿಸಿದರು. ಹೆಚ್ಚಿನ ಸಂಖ್ಯೆಯ ರಿಟ್ವೀಟ್ಗಳು, ಹಂಚಿಕೆಗಳನ್ನು ಮತ್ತು ಕಾಮೆಂಟ್ಗಳನ್ನು ಇವರ ವಿಡಿಯೋಗಳು ಪಡೆದುಕೊಂಡಿವೆ. ಮಾತ್ರವಲ್ಲ, ಮೋದಿಯವರ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಕೊಟ್ಟ ಬಳಿಕ ಇವರ ಜನಪ್ರಿಯತೆ ಇನ್ನೂ ಹೆಚ್ಚಾಗಿದೆ. ಇಡೀ ದೇಶವೇ ಇವರ ಬಗ್ಗೆ ಇಂದು ತಿಳಿದುಕೊಂಡಿದೆ. ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿರುವ ಕೆಲವು ಸಾಧಕರು ಫಾಲೋವರ್ ಸಂಖ್ಯೆಯಲ್ಲಿ ತೀವ್ರ ಏರಿಕೆಯನ್ನು ಕಂಡಿದ್ದಾರೆ.
ಫುಡ್ ಬ್ಯಾಂಕ್ ಇಂಡಿಯಾ ಸಂಸ್ಥಾಪಕಿ ಸ್ನೇಹ ಮೋಹನದಾಸ್, ಬಾಂಬ್ ಸ್ಫೋಟದಿಂದ ಬದುಕುಳಿದಾಕೆ ಮತ್ತು ದಿವ್ಯಾಂಗರ ಹಕ್ಕುಗಳ ಕಾರ್ಯಕರ್ತೆ ಮಾಳವಿಕಾ ಅಯ್ಯರ್, ಕಾಶ್ಮೀರದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪುನರುಜ್ಜೀವನಗೊಳಿಸಲು ಮಹಿಳಾ ಕುಶಲಕರ್ಮಿಗಳಿಗೆ ಸಹಾಯ ಮಾಡುತ್ತಿರುವ ಯುವ ಉದ್ಯಮಿ ಆರಿಫಾ ಜನ್, ನೀರಿನ ಕೊರತೆಯನ್ನು ಎದುರಿಸಲು ಸುಸ್ಥಿರ ವಿನ್ಯಾಸವನ್ನು ಬಳಸುವ ವಾಟರ್ ಚಾಂಪಿಯನ್ ಕಲ್ಪನಾ ರಮೇಶ್, ಮಹಾರಾಷ್ಟ್ರದ ಬಂಜಾರ ಮಹಿಳೆಯರ ಕರಕುಶಲ ವಸ್ತುಗಳನ್ನು ಉತ್ತೇಜಿಸಲು ಎರಡು ದಶಕಗಳಿಂದ ಕೆಲಸ ಮಾಡುತ್ತಿರುವ ವಿಜಯ ಪವಾರ್, ಶೌಚಾಲಯ ನಿರ್ಮಿಸಲು ಹಣ ಸಂಗ್ರಹಿಸಿದ ಕಾನ್ಪುರದ ಕಲಾವತಿ ದೇವಿ ಮತ್ತು ತಮ್ಮ ಮನೆಯಲ್ಲಿ ಅಣಬೆ ಕೃಷಿಯನ್ನು ಪ್ರಾರಂಭಿಸಿದ ಬಿಹಾರದ ಮುಂಗರ್ನ ವೀಣಾ ದೇವಿ ಅವರು ಮೋದಿಯವರ ಸಾಮಾಜಿಕ ಜಾಲತಾಣಗಳ ಖಾತೆ ಮೂಲಕ ತಮ್ಮ ಯಶೋಗಾಥೆಯನ್ನು ಹಂಚಿಕೊಂಡರು.
ಆರಿಫಾ ಜನ್, ವೀಣಾ ದೇವಿ ಮತ್ತು ಕಲಾವತಿ ದೇವಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ‘ನಾರಿ ಶಕ್ತಿ ಪುರಸ್ಕಾರ್’ ಅನ್ನು ಭಾನುವಾರ ಪ್ರದಾನ ಮಾಡಿದರು.
ಟ್ವೀಟ್ ಮಾಡಿರುವ ಮೋದಿ, “ಭಾರತವು ರಾಷ್ಟ್ರದ ಎಲ್ಲಾ ಭಾಗಗಳಲ್ಲಿ ಅತ್ಯುತ್ತಮ ಮಹಿಳಾ ಸಾಧಕರನ್ನು ಹೊಂದಿದೆ. ಈ ಮಹಿಳೆಯರು ವ್ಯಾಪಕವಾದ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಹೋರಾಟಗಳು ಮತ್ತು ಆಕಾಂಕ್ಷೆಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತವೆ. ಅಂತಹ ಮಹಿಳೆಯರ ಸಾಧನೆಗಳನ್ನು ನಾವು ಆಚರಿಸುತ್ತಲೇ ಇರುತ್ತೇವೆ ಮತ್ತು ಅವರಿಂದ ಕಲಿಯುತ್ತಲೇ ಇರುತ್ತೇವೆ” ಎಂದಿದ್ದಾರೆ.
ಫುಡ್ ಬ್ಯಾಂಕ್ ಇಂಡಿಯಾದ ಮೋಹನದಾಸ್ ಅವರು ಮೊದಲ ಟ್ವೀಟ್ ಮಾಡಿ, “ನೀವು ಚಿಂತನೆಗಾಗಿ ಆಹಾರದ ಬಗ್ಗೆ ಕೇಳಿದ್ದೀರಿ. ಈಗ, ಇದು ಕ್ರಿಯೆಯ ಮತ್ತು ನಮ್ಮ ಬಡವರಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸಬೇಕಾದ ಸಮಯ. ನಾವು 20 ಕ್ಕೂ ಹೆಚ್ಚು ಅಧ್ಯಾಯಗಳನ್ನು ಹೊಂದಿದ್ದೇವೆ ಮತ್ತು ನಮ್ಮ ಕೆಲಸದ ಮೂಲಕ ಹಲವಾರು ಜನರ ಮೇಲೆ ಪ್ರಭಾವ ಬೀರಿದ್ದೇವೆ. ಸಾಮೂಹಿಕ ಅಡುಗೆ, ಅಡುಗೆ ಮ್ಯಾರಥಾನ್ಗಳು, ಸ್ತನ್ಯಪಾನ ಜಾಗೃತಿ ಡ್ರೈವ್ಗಳಂತಹ ಚಟುವಟಿಕೆಗಳನ್ನು ಸಹ ನಾವು ಪ್ರಾರಂಭಿಸಿದ್ದೇವೆ” ಎಂದು ಚೆನ್ನೈ ಮೂಲದ ಮೋಹನ್ದಾಸ್ ಟ್ವೀಟ್ ಮಾಡಿದ್ದಾರೆ.
You heard of food for thought. Now, it is time for action and a better future for our poor.
Hello, I am @snehamohandoss. Inspired by my mother, who instilled the habit of feeding the homeless, I started this initiative called Foodbank India. #SheInspiresUs pic.twitter.com/yHBb3ZaI8n
— Narendra Modi (@narendramodi) March 8, 2020
ಬಾಂಬ್ ಸ್ಫೋಟದಿಂದ ಬದುಕುಳಿದಾಕೆ ಮತ್ತು ದಿವ್ಯಾಂಗರ ಹಕ್ಕುಗಳ ಕಾರ್ಯಕರ್ತೆ ಮಾಳವಿಕಾ ಅಯ್ಯರ್ ಅವರು ಟ್ವೀಟ್ ಮಾಡಿದ್ದು ಹೀಗೆ…
Acceptance is the greatest reward we can give to ourselves. We can’t control our lives but we surely can control our attitude towards life. At the end of the day, it is how we survive our challenges that matters most.
Know more about me and my work- @MalvikaIyer #SheInspiresUs pic.twitter.com/T3RrBea7T9
— Narendra Modi (@narendramodi) March 8, 2020
ಕಾಶ್ಮೀರದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಪುನರುಜ್ಜೀವನಗೊಳಿಸಲು ಮಹಿಳಾ ಕುಶಲಕರ್ಮಿಗಳಿಗೆ ಸಹಾಯ ಮಾಡುತ್ತಿರುವ ಯುವ ಉದ್ಯಮಿ ಆರಿಫಾ ಜನ್ ಅವರು ಟ್ವೀಟ್ ಮಾಡಿದ್ದು ಹೀಗೆ…
I always dreamt of reviving the traditional crafts of Kashmir because this is a means to empower local women.
I saw the condition of women artisans and so I began working to revise Namda craft.
I am Arifa from Kashmir and here is my life journey. #SheInspiresUs pic.twitter.com/hT7p7p5mhg
— Narendra Modi (@narendramodi) March 8, 2020
ನೀರಿನ ಕೊರತೆಯನ್ನು ಎದುರಿಸಲು ಸುಸ್ಥಿರ ವಿನ್ಯಾಸವನ್ನು ಬಳಸುವ ವಾಟರ್ ಚಾಂಪಿಯನ್ ಕಲ್ಪನಾ ರಮೇಶ್ ಅವರು ಟ್ವೀಟ್ ಮಾಡಿದ್ದು ಹೀಗೆ…
Be a warrior but of a different kind!
Be a water warrior.
Have you ever thought about water scarcity? Each one of us can collectively act to create a water secure future for our children
Here is how I am doing my bit. @kalpana_designs pic.twitter.com/wgQLqmdEEC
— Narendra Modi (@narendramodi) March 8, 2020
ಮಹಾರಾಷ್ಟ್ರದ ಬಂಜಾರ ಮಹಿಳೆಯರ ಕರಕುಶಲ ವಸ್ತುಗಳನ್ನು ಉತ್ತೇಜಿಸಲು ಎರಡು ದಶಕಗಳಿಂದ ಕೆಲಸ ಮಾಡುತ್ತಿರುವ ವಿಜಯ ಪವಾರ್ ಅವರು ಟ್ವೀಟ್ ಮಾಡಿದ್ದು ಹೀಗೆ…
You have heard about handicrafts from different parts of India. My fellow Indians, I present to you handicrafts of the Banjara community in rural Maharashtra. I have been working on this for the last 2 decades and have been assisted by a thousand more women- Vijaya Pawar pic.twitter.com/A3X47245E3
— Narendra Modi (@narendramodi) March 8, 2020
ಶೌಚಾಲಯ ನಿರ್ಮಿಸಲು ಹಣ ಸಂಗ್ರಹಿಸಿದ ಕಾನ್ಪುರದ ಕಲಾವತಿ ದೇವಿ ಅವರು ಟ್ವೀಟ್ ಮಾಡಿದ್ದು ಹೀಗೆ…
मैं जिस जगह पे रहती थी, वहां हर तरफ गंदगी ही गंदगी थी। लेकिन दृढ़ विश्वास था कि स्वच्छता के जरिए हम इस स्थिति को बदल सकते हैं।
लोगों को समझाने का फैसला किया। शौचालय बनाने के लिए घूम-घूमकर एक-एक पैसा इकट्ठा किया।
आखिरकार सफलता हाथ लगी।
कलावती देवी, कानपुर #SheInspiresUs pic.twitter.com/t9b6deXt4g
— Narendra Modi (@narendramodi) March 8, 2020
ತಮ್ಮ ಮನೆಯಲ್ಲಿ ಅಣಬೆ ಕೃಷಿಯನ್ನು ಪ್ರಾರಂಭಿಸಿದ ಬಿಹಾರದ ಮುಂಗರ್ನ ವೀಣಾ ದೇವಿ ಅವರು ಟ್ವೀಟ್ ಮಾಡಿದ್ದು ಹೀಗೆ…
जहां चाह वहां राह… इच्छाशक्ति से सब कुछ हासिल किया जा सकता है।
मेरी वास्तविक पहचान पलंग के नीचे एक किलो मशरूम की खेती से शुरू हुई थी।
लेकिन इस खेती ने मुझे न केवल आत्मनिर्भर बनाया, बल्कि मेरे आत्मविश्वास को बढ़ाकर एक नया जीवन दिया।
वीणा देवी, मुंगेर #SheInspiresUs pic.twitter.com/MkfyZ8mnZp
— Narendra Modi (@narendramodi) March 8, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.