ಚೆನ್ನೈ: ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (ಒಟಿಎ) ಶನಿವಾರ 136 ಪುರುಷ ಕೆಡೆಟ್ಗಳಿಗೆ ಮತ್ತು 31 ಮಹಿಳಾ ಕೆಡೆಟ್ಗಳಿಗೆ ಪಾಸಿಂಗ್ ಔಟ್ ಪೆರೇಡ್ ನಡೆಯಿತು. ಹುತಾತ್ಮ ಯೋಧ ಮೇಜರ್ ಪ್ರಸಾದ್ ಮಹಾದಿಕ್ ಅವರ ಪತ್ನಿ 33 ವರ್ಷದ ಗೌರಿ ಮಹಾದಿಕ್ ಅವರು ಕೂಡ ಪರೇಡ್ ಭಾಗವಾಗಿದ್ದರು.
ಪೆರೇಡ್ ಅನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಪರಿಶೀಲಿಸಿದರು. ಕೆಡೆಟ್ಗಳನ್ನು ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ನಿಯೋಜಿಸಲಾಗಿದೆ. ಪಾಸಿಂಗ್ ಔಟ್ ಪೆರೇಡ್ನಲ್ಲಿ ಭೂತಾನ್ನ ಐದು, ಫಿಜಿಯ ಇಬ್ಬರು, ಪಪುವಾ ನ್ಯೂಗಿನಿಯಾದ ಒಬ್ಬರು ಪುರುಷ ಕೆಡಟ್ ಇದ್ದರು ಮತ್ತು ಭೂತಾನ್ನ ಮೂವರು ಲೇಡಿ ಕೆಡೆಟ್ಗಳು ಸಹ ಭಾಗವಹಿಸಿದ್ದರು.
ಪೆರೇಡ್ ನಂತರ, ಅಡ್ಮಿರಲ್ ಸಿಂಗ್ ಅವರು ಹರ್ಪ್ರೀತ್ ಸಿಂಗ್ ಅವರಿಗೆ ಸ್ವಾರ್ಡ್ ಆಫ್ ಹಾನರ್ ಮತ್ತು ಚಿನ್ನದ ಪದಕವನ್ನು ನೀಡಿದರು, ವೈಭವ್ ಮಹಾಜನ್ ಅವರಿಗೆ ಬೆಳ್ಳಿ ಮತ್ತು ವರುಣ್ ಪ್ರತಾಪ್ ಸಿಂಗ್ ಅವರಿಗೆ ಕಂಚು ನೀಡಿದರು.
ಹೊಸ ಕೆಡೆಟ್ಗಳಿಗಾಗಿ ಭಾಷಣ ಮಾಡಿದ ಅಡ್ಮಿರಲ್ ಸಿಂಗ್ ಅವರು, ” ಭಾರತೀಯ ಸೇನೆಯ ಪ್ರಮುಖ ಮೌಲ್ಯಗಳಿಗೆ ಬದ್ಧರಾಗಿರಬೇಕು ಮತ್ತು ಭದ್ರತಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಎಲ್ಲಾ ಪ್ರಯತ್ನಗಳಲ್ಲಿ ಶ್ರೇಷ್ಠರಾಗಲು ಪ್ರಯತ್ನಿಸಬೇಕು” ಎಂದು ಕಿವಿಮಾತು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.