ನವದೆಹಲಿ: ಪ್ರಧಾನಮಂತ್ರಿ ಜನ್ಧನ್ ಖಾತೆ ಯೋಜನೆಯಿಂದಾಗಿ ಬ್ಯಾಂಕ್ ಖಾತೆಗಳ ಮಹಿಳಾ ಮಾಲೀಕತ್ವದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. 2014ರಲ್ಲಿ ಇದ್ದ ಶೇ. 43 ರಿಂದ 2017 ರಲ್ಲಿ ಶೇ 77 ಕ್ಕೆ ಮಹಿಳೆಯರ ಬ್ಯಾಂಕ್ ಖಾತೆ ಮಾಲೀಕತ್ವ ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿದೆ.
ಕನ್ಸಲ್ಟಿಂಗ್ ಸಂಸ್ಥೆ ಮೈಕ್ರೋ ಸೇವ್ ಕನ್ಸಲ್ಟಿಂಗ್ (ಎಂಎಸ್ಸಿ)ಯ ‘ಭಾರತದಲ್ಲಿ ಮಹಿಳಾ ಆರ್ಥಿಕ ಸೇರ್ಪಡೆಯ ನೈಜ ಕಥೆ’ ಎಂಬ ವರದಿಯು, ಮೂರು ವರ್ಷಗಳಲ್ಲಿ (2014-17) ಆರ್ಥಿಕ ಸೇರ್ಪಡೆಯಲ್ಲಿನ ಲಿಂಗ ಅಂತರವನ್ನು 14 ಶೇಕಡಾ ಅಂಕಗಳಿಂದ ಕಡಿಮೆ ಮಾಡುವಲ್ಲಿ ದೇಶ ಯಶಸ್ವಿಯಾಗಿದೆ ಎಂದು ಹೇಳಿದೆ.
“ಪ್ರಧಾನ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ) ಬ್ಯಾಂಕ್ ಖಾತೆಗಳಲ್ಲಿ ಮಹಿಳೆಯರ ಮಾಲೀಕತ್ವವನ್ನು 2014 ರಲ್ಲಿ ಶೇ. 43 ರಿಂದ 2017 ರಲ್ಲಿ ಶೇ. 77 ಕ್ಕೆ ಏರಿಸಿದೆ” ಎಂದು ಅದು ಹೇಳಿದೆ.
ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ಥಾನಗಳು ಕ್ರಮವಾಗಿ ಕೇವಲ ಶೇಕಡಾ 36 ಮತ್ತು ಶೇಕಡಾ 7 ರಷ್ಟು ಮಹಿಳೆಯ ಮಾಲೀಕತ್ವದ ಖಾತೆಯನ್ನು ಹೊಂದಿವೆ ಎಂದು ಹೇಳಿದೆ.
ಆದರೂ, ಕೆಲವು ಖಾತೆಗಳು ಇನ್ನೂ ನಿಷ್ಕ್ರಿಯವಾಗಿವೆ ಎಂದು ವರದಿ ಹೇಳಿದೆ.
ಈ ಖಾತೆಗಳ ಬಳಕೆಯನ್ನು ಮಿತಿಗೊಳಿಸುವ ಸಂಕೀರ್ಣ ಲಿಂಗ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಎಂಎಸ್ಸಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಗ್ರಹಾಂ ಎ ಎನ್ ರೈಟ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 27, 2014 ರಂದು ಪ್ರಾರಂಭಿಸಿದ ಪಿಎಂಜೆಡಿವೈ ಬಡವರಿಗೆ ಆರ್ಥಿಕ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಬಡವರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವುದು, ಅವರಿಗೆ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳನ್ನು (ರುಪೇ ಕಾರ್ಡ್ಗಳ ಮೂಲಕ) ನೀಡುವುದು ಮತ್ತು ಸಾಲ ಮತ್ತು ವಿಮೆಯ ಲಾಭವನ್ನು ಪಡೆಯುವ ಸ್ಥಿತಿಯಲ್ಲಿ ಇಡುವುದು ಮುಂತಾದವುಗಳು ಯೋಜನೆಯಡಿ ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.