ಭುವನೇಶ್ವರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪರಿಸರ ಮಹಿಳಾ ಮರಳು ಶಿಲ್ಪಿಗಳು ಒರಿಸ್ಸಾದ ಪುರಿ ಬೀಚ್ನಲ್ಲಿ ‘ಮಹಿಳಾ ಶಕ್ತಿ’ಯ ಸಂದೇಶ ಸಾರುವ ಅದ್ಭುತವಾದ ಮರಳು ಶಿಲ್ಪವನ್ನು ರಚನೆ ಮಾಡಿದ್ದಾರೆ.
ಮಹಿಳೆಯರು ನಿರ್ಮಿಸಿದ ಈ ಮರಳು ಶಿಲ್ಪವನ್ನು ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2020. ಮರಳು ಕಲಾ ಸಂಸ್ಥೆಯ ಮಹಿಳಾ ಮರಳು ಕಲಾವಿದರು ಮಹಿಳಾ ಶಕ್ತಿಯ ಸಂದೇಶವನ್ನು ಸಾರುವ ಶಿಲ್ಪವನ್ನು ಪುರಿ ಬೀಚ್ನಲ್ಲಿ ರಚನೆ ಮಾಡಿದ್ದಾರೆ” ಇದು ಪಟ್ನಾಯಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
On the occasion of Women’s Day eleven girl sand artists of our SandArt
Institute created a sand sculpture with message “#WomenPower“, at Puri
beach in Odisha . #InternationalWomenDay2020 pic.twitter.com/oPgpQdv4lE— Sudarsan Pattnaik (@sudarsansand) March 7, 2020
ಮಾರ್ಚ್ 8ರಂದು ವಿಶ್ವದಾದ್ಯಂತ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಮಹಿಳೆಯರು ಮಾಡಿದ ಸಾಧನೆಯನ್ನು ಎತ್ತಿತೋರಿಸುವ ಈ ದಿನದ ಮುಖ್ಯ ಉದ್ದೇಶ. ಲಿಂಗ ಸಮಾನತೆಯನ್ನು ಸಾರುವ ಮಹತ್ವದ ದೇಹದೊಂದಿಗೆ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.