ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಿಂದ 18 ಕಿಲೋಮೀಟರ್ ದೂರದಲ್ಲಿರುವ ಭಾಭನಿಯಾವ್ ಗ್ರಾಮದಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗವು ನಡೆಸಿದ ಉತ್ಖನನದ ವೇಳೆ 4000 ವರ್ಷ ಹಳೆಯ ಶಿವಲಿಂಗ ಪತ್ತೆಯಾಗಿದೆ. ಈ ಗ್ರಾಮದಲ್ಲಿ ಪ್ರಾಚೀನ ಕರಕುಶಲ ಗ್ರಾಮಗಳನ್ನು ಹಿಂದಿನ ಸಂಶೋಧನೆಯು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಈ ಉತ್ಖನನವನ್ನು ನಡೆಸಲಾಯಿತು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಪ್ರಕಾರ, ಈ ಶಿವಲಿಂಗವು ಸಾವಿರಾರು ವರ್ಷಗಳು ಹಳೆಯದಾಗಿದೆ, ಇದು ಪತ್ತೆಯಾದ ಸ್ಥಳವು ಹಿಂದೆ ಆರಾಧನಾ ಸ್ಥಳವಾಗಿರುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ ಎಂದಿದ್ದಾರೆ.
ಈ ಗ್ರಾಮದಲ್ಲಿ ಹಲವಾರು ಪ್ರಾಚೀನ ಕರಕುಶಲ ವಸ್ತುಗಳು ಪತ್ತೆಯಾಗಿದ್ದು, ಈ ಗ್ರಾಮಕ್ಕೆ ಸುಮಾರು 3500 ವರ್ಷಗಳ ಇತಿಹಾಸ ಇರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ಪತ್ತೆಯಾದ ಮಡಿಕೆಯೊಂದರ ಬಗ್ಗೆ ಸಂಶೋಧನೆ ನಡೆಸಿದಾಗ ಇದು ತಾಮ್ರ ಶಿಲಾಯುಗಕ್ಕೆ ಸಂಬಂಧಪಟ್ಟದ್ದಾಗಿರಬಹುದು ಎಂದು ತಿಳಿದುಬಂದಿದೆ. ಕುಶಾನರ ಕಾಲಕ್ಕೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ವಾರಣಾಸಿ ಸುತ್ತಮುತ್ತಲ ಪ್ರದೇಶದಲ್ಲಿ ಹಲವಾರು ದೇಗುಲಗಳು ಮತ್ತು ಗುಪ್ತ ತಾಣಗಳು ಪತ್ತೆಯಾದ ಬಳಿಕ ಪುರಾತತ್ವ ತಜ್ಞರ ಕುತೂಹಲಗಳು ಇನ್ನಷ್ಟು ಕೆರಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.