ನವದೆಹಲಿ: ಫ್ಲೈಯಿಂಗ್ ಕಾರುಗಳನ್ನು ಇನ್ನು ಮುಂದೆ ಕೇವಲ ಟಿವಿ ಪರದೆಗಳಲ್ಲಿ ಮಾತ್ರವಲ್ಲ ವಾಸ್ತವದಲ್ಲೂ ನೋಡಬಹುದಾಗಿದೆ. ಡಚ್ ಕಂಪನಿಯೊಂದು ತನ್ನ ಹಾರುವ ಕಾರನ್ನು ನಮ್ಮ ರಾಷ್ಟ್ರದಲ್ಲಿ ಪರೀಕ್ಷಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
ಪಿಎಎಲ್-ವಿ (ಪರ್ಸನಲ್ ಏರ್ ಆ್ಯಂಡ್ ಲ್ಯಾಂಡ್ ವೆಹಿಕಲ್) ಎಂಬ ಡಚ್ ಕಂಪನಿಯು, PAL-V Liberty ಎಂಬ ಮೊದಲ ವಾಣಿಜ್ಯ ವೈಯಕ್ತಿಕ ಫ್ಲೈಯಿಂಗ್ ಕಾರ್ ಉತ್ಪಾದನೆಯಲ್ಲಿ ತೊಡಗಿದೆ, ಇದು ಕಾಂಪ್ಯಾಕ್ಟ್ 2 ವ್ಯಕ್ತಿಗಳ ಏರ್ಕ್ರಾಫ್ಟ್ ಆಗಿದ್ದು, ಸಾರ್ವಜನಿಕ ರಸ್ತೆಗಳಲ್ಲೂ ಇದು ಪ್ರಯಾಣಿಸಬಲ್ಲದು.
“ನಾವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ನಮ್ಮ ತಂತ್ರಜ್ಞಾನವನ್ನು ಪ್ರದರ್ಶಿಸಿದ್ದೇವೆ. ನಾವು ಶೀಘ್ರದಲ್ಲೇ ಭಾರತದಲ್ಲಿ ಪರೀಕ್ಷೆಯನ್ನು ಪ್ರಾರಂಭಿಸುವ ನಿರೀಕ್ಷೆ ಇದೆ” ಎಂದು Pal-V Co ಅಧ್ಯಕ್ಷ ಡಾ. ಜಾನ್ಪೀಟರ್ ಕೊನಿಂಗ್ ಟೋಲ್ ಇಟಿ ಹೇಳಿದ್ದಾರೆ.
ಪಿಎಎಲ್-ವಿ ಮೊದಲು 2012 ರಲ್ಲಿ ವಾಹನದ ಮೂಲಮಾದರಿಯನ್ನು ಅನಾವರಣಗೊಳಿಸಿತ್ತು. ಇದು ಮುಂದಿನ ಒಂದು ವರ್ಷದೊಳಗೆ ಜಾಗತಿಕವಾಗಿ ವೈಯಕ್ತಿಕ ಖರೀದಿದಾರರಿಗೆ ವಾಣಿಜ್ಯಿಕವಾಗಿ ವಾಹನವನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತಿದೆ.
ವಾಹನವನ್ನು ಹಾರಿಸುವ ಸರ್ಟಿಫಿಕೇಟ್ ಅನ್ನು ಪಡೆಯಲು ಖರೀದಿದಾರರಿಗೆ ತರಬೇತಿ ನೀಡುವುದಾಗಿ ಕಂಪನಿ ತಿಳಿಸಿದೆ. ತರಬೇತಿ ಪ್ರಕ್ರಿಯೆಯು ಸುಮಾರು 35-40 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.