ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನಲೆಯಲ್ಲಿ ಭಾರತೀಯ ರೈಲ್ವೆಯು ತನ್ನ ವಲಯದಾದ್ಯಂತ ಮಾರ್ಚ್ 1 ರಿಂದ 10 ರವರೆಗೆ ಹತ್ತು ದಿನಗಳ ಸುದೀರ್ಘ ‘each for equal’ ಅಭಿಯಾನವನ್ನು ನಡೆಸುತ್ತಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಾನುವಾರ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಅಭಿಯಾನದ ವಿಷಯವು #EachforEqual ಆಗಿದೆ, ಇದು ನಮ್ಮಲ್ಲಿ ಪ್ರತಿಯೊಬ್ಬರೂ ಒಟ್ಟಾಗಿ ಲಿಂಗ ಸಮಾನ ಜಗತ್ತನ್ನು ರಚಿಸಲು ಸಹಾಯ ಮಾಡಬೇಕು ಎಂಬುದನ್ನು ಸೂಚಿಸುತ್ತದೆ. ಅಲ್ಲದೇ ರೈಲ್ವೆಯು #SheInspiresU ಮೇಲೆ ಕೇಂದ್ರೀಕರಿಸಿ ಮಹಿಳಾ ಸಾಧಕರ ಸ್ಫೂರ್ತಿದಾಯಕ ಕಥೆಗಳನ್ನು ಎತ್ತಿ ತೋರಿಸಲಿದೆ.
“ಈ ಅಭಿಯಾನವು, ಭಾರತೀಯ ರೈಲ್ವೆ ಮಹಿಳಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲು, ಮಹಿಳಾ ಉದ್ಯೋಗಿಗಳನ್ನು ಸಬಲೀಕರಣಗೊಳಿಸಲು ಮತ್ತು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಪಾತ್ರವನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳನ್ನು ಎತ್ತಿ ತೋರಿಸಲಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ
ಮಹಿಳೆಯರ ಪರಿಶ್ರಮ ಮತ್ತು ಸಮರ್ಪಣೆಯು ಎಲ್ಲಾ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಉತ್ತಮವಾಗಿ ಒದಗಿಸುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.
ಈ ಅಭಿಯಾನದ ದೃಷ್ಟಿಯಿಂದ, ರೈಲ್ವೆ ವಲಯಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮೆರವಣಿಗೆ, ಓಟ, ವಿಶೇಷ ಮಹಿಳಾ ಭಾಷಣಕಾರರ ಮಾತುಕತೆ, ಉಪನ್ಯಾಸಗಳು, ನಾಟಕ ಇತ್ಯಾದಿಗಳು ನಡೆಯಲಿದೆ. ರೈಲ್ವೇ ನಿಲ್ದಾಣಗಳ ಟಿವಿ ಪರದೆಗಳ ಮೇಲೆ ಮಹಿಳಾ ಸಾಧಕರ ಸಾಧನೆಗಳ ಬಗ್ಗೆ ಸ್ಕ್ರೀನಿಂಗ್ ನಡೆಯಲಿದೆ.
कदम से कदम मिलाकर भारतीय रेल की महिला कर्मचारी हर क्षेत्र में अपना अहम योगदान दे रही हैं।#EachforEqual pic.twitter.com/vhpbZe8PTP
— Ministry of Railways (@RailMinIndia) March 5, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.