ನವದೆಹಲಿ: ಪುಲ್ವಾಮ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದ ತನಿಖೆಯಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಲಾಗಿದೆ. ಜೈಶ್-ಎ-ಮೊಹಮ್ಮದ್ (ಜೆಎಂ) ನಡೆಸಿದ ಈ ದಾಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಇಬ್ಬರು ಜನರನ್ನು ಬಂಧಿಸಿದೆ.
ಬಂಧಿತರಾದ ಇಬ್ಬರನ್ನು, 19 ವರ್ಷದ ವೈಜ್-ಉಲ್-ಇಸ್ಲಾಂ ಮತ್ತು 32 ವರ್ಷದ ಮೊಹಮ್ಮದ್ ಅಬ್ಬಾಸ್ ರಾಥರ್ ಎಂದು ಗುರುತಿಸಲಾಗಿದ್ದು, ಇವರು ಶ್ರೀನಗರ ಮತ್ತು ಪುಲ್ವಾಮಾ ಮೂಲದವರು.
ಆರೋಪಿಗಳು ಅಮೇಜಾನ್ ಮೂಲಕ ಬಾಂಬ್ ತಯಾರಿಸಲು ಸ್ಪೋಟಕವನ್ನು ಖರೀದಿ ಮಾಡಿದ್ದರು ಎಂಬುದು ತಿಳಿದು ಬಂದಿದೆ. ಎನ್ಐಎ ಕೋರಿಕೆಯ ಮೇರೆ ಅಮೆಜಾನ್ ತನ್ನ ಇ-ಕಾಮರ್ಸ್ ವೆಬ್ಸೈಟ್ ಆರೋಪಿಗಳ ಖರೀದಿ ಮಾಹಿತಿಯನ್ನು ಹಂಚಿಕೊಂಡಿದ್ದು, ಇದರಲ್ಲಿ ಸ್ಪೋಟಕ ಖರೀದಿ ಮಾಡಿದ್ದು ದೃಢಪಟ್ಟಿದೆ. ಅಮೇಜಾನ್ ಒದಗಿಸಿದ ವಿವರಗಳ ಆಧಾರದ ಮೇಲೆ, ಎನ್ಐಎ ವೈಜ್-ಉಲ್-ಇಸ್ಲಾಂನನ್ನು ಬಂಧಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ, ಅಮೆಜಾನ್ನಲ್ಲಿನ ತನ್ನ ಖಾತೆಯನ್ನು ಜೈಶೇ-ಇ-ಮೊಹಮ್ಮದ್ ನಿರ್ದೇಶನದ ಮೇರೆಗೆ ರಾಸಾಯನಿಕಗಳು, ಬ್ಯಾಟರಿಗಳು ಮತ್ತು ಇತರ ಸಂಬಂಧಿತ ಪರಿಕರಗಳನ್ನು ಖರೀದಿಸಲು ಬಳಸಿದ್ದಾಗಿ ಇಸ್ಲಾಂ ಬಹಿರಂಗಪಡಿಸಿದ್ದಾನೆ. ಅಗತ್ಯವಾದ ಖರೀದಿಯ ನಂತರ ಈತ ಜೈಶೇ ಭಯೋತ್ಪಾದಕರಿಗೆ ವೈಯಕ್ತಿಕವಾಗಿ ವಸ್ತುವನ್ನು ತಲುಪಿಸಿದ್ದಾನೆ ಎಂಬುದನ್ನೂ ಈತ ಬಹಿರಂಗಪಡಿಸಿದ್ದಾನೆ.
ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಎನ್ಐಎ ದಾಳಿಯ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದು, ಅಮಾನವೀಯ ದಾಳಿಯ ಭೀಕರ ಹಿನ್ನಲೆಗಳು ಒಂದೊಂದಾಗಿ ಕಳಚುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.