ನವದೆಹಲಿ: ಚೀನಾ ಮತ್ತು ಪಾಕಿಸ್ಥಾನ ಸೇರಿದಂತೆ ಕೆಲ ದೇಶಗಳು ಭಾರತದ ಸೈಬರ್ ಭದ್ರತಾ ವ್ಯವಸ್ಥೆಯನ್ನು ಮುರಿದು 1 ಲಕ್ಷಕ್ಕೂ ಹೆಚ್ಚು ಭಾರತೀಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿವೆ, ಈ ಮೂಲಕ ಹಲವಾರು ಸೈಬರ್ ದಾಳಿಯನ್ನು ನಡೆಸಿವೆ. ಈ ದಾಳಿಗಳು ನಮ್ಮ ದೇಶದ ಸೈಬರ್ ಭದ್ರತೆಗೆ ದೊಡ್ಡ ಮಟ್ಟದಲ್ಲೇ ಬೆದರಿಕೆಯನ್ನೊಡ್ಡಿವೆ.
ಕಳೆದ ಐದು ವರ್ಷಗಳಲ್ಲಿ, 1,29,747 ಭಾರತೀಯ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವಾಲಯವು ರಾಜ್ಯಸಭೆಗೆ ಶುಕ್ರವಾರ ಮಾಹಿತಿ ನೀಡಿದೆ.
ವಿದೇಶಿ ಹ್ಯಾಕರ್ಗಳನ್ನು ನಿರಂತರವಾಗಿ ಭಾರತೀಯ ವೆಬ್ಸೈಟ್ಗಳ ಮತ್ತು ಅದರ ಭದ್ರತಾ ವೈಶಿಷ್ಟ್ಯಗಳ ಮೇಲೆ ಆಕ್ರಮಣ ಮಾಡುತ್ತಿದೆ ಎಂಬುದನ್ನು CERT-In (Indian Computer Emergency Response Team) ಪತ್ತೆ ಹಚ್ಚಿವೆ.
ಚೀನಾ ಮತ್ತು ಪಾಕಿಸ್ಥಾನ ಮಾತ್ರವಲ್ಲದೇ, ಫ್ರಾನ್ಸ್, ನೆದರ್ಲ್ಯಾಂಡ್ಸ್, ರಷ್ಯಾ, ಸೆರ್ಬಿಯಾ, ತೈವಾನ್ ಮತ್ತು ಟುನೀಶಿಯಾದಂತಹ ದೇಶಗಳ ಹ್ಯಾಕರ್ಗಳು ಸಹ ಈ ಸೈಬರ್ ದಾಳಿಯ ಹಿಂದೆ ಇರುವುದು ಕಂಡುಬಂದಿದೆ.
2015 ರಲ್ಲಿ, ಭಾರತದಲ್ಲಿ 27,205 ವೆಬ್ಸೈಟ್ಗಳು ಹ್ಯಾಕ್ ಆಗಿದ್ದರೆ, 2016 ರಲ್ಲಿ 33, 000 ಕ್ಕೂ ಹೆಚ್ಚು ಭಾರತೀಯ ವೆಬ್ಸೈಟ್ಗಳು ಸೈಬರ್ ದಾಳಿಗೆ ಒಳಗಾಗಿದ್ದವು. 2017 ರಲ್ಲಿ ಈ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ, ಕನಿಷ್ಠ 30,067 ವೆಬ್ಸೈಟ್ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. 2018 ರಲ್ಲಿ, 17,560 ವೆಬ್ಸೈಟ್ಗಳು ಹ್ಯಾಕ್ ಆಗಿದ್ದರೆ, 2019 ರಲ್ಲಿ ಕನಿಷ್ಠ 21, 767 ವೆಬ್ಸೈಟ್ಗಳು ಸೈಬರ್ ದಾಳಿಗೆ ಒಳಗಾಗಿವೆ.
ಭಾರತದ ಸೈಬರ್ ಸುರಕ್ಷತೆಯನ್ನು ಸುಧಾರಿಸಲು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ. ಹೊಸ ಸವಾಲುಗಳು ಮತ್ತು ಬೆದರಿಕೆಯನ್ನು ಎದುರಿಸಲು ಎಚ್ಚರಿಕೆಯ ಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.