ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮತ್ತು ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.
ಬ್ಯಾಂಕಿನ ಠೇವಣಿದಾರರ ಹಣ ಸುರಕ್ಷಿತವಾಗಿದೆ ಮತ್ತು ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸೀತಾರಾಮನ್ ಅವರು ಭರವಸೆಯನ್ನು ನೀಡಿದ್ದಾರೆ.
“2017 ರಿಂದ ಆರ್ಬಿಐ ಎಸ್ ಬ್ಯಾಂಕ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮತ್ತು ಪರಿಶೀಲನೆ ನಡೆಸುತ್ತಿದೆ. ಬ್ಯಾಂಕಿನಲ್ಲಿ ಆಡಳಿತದ ಸಮಸ್ಯೆಗಳು ಮತ್ತು ದುರ್ಬಲ ಅನುಸರಣೆ ಇರುವುದನ್ನು ಅದು ಗಮನಿಸಿದೆ. ಅಪಾಯಕಾರಿ ಸಾಲ ನಿರ್ಧಾರಗಳೊಂದಿಗೆ ತಪ್ಪು ಆಸ್ತಿ ವರ್ಗೀಕರಣ ಅದರಲ್ಲಿತ್ತು” ಎಂದು ಪತ್ರಿಕಾಗೋಷ್ಠಿಯಲ್ಲಿ ಸೀತಾರಾಮನ್ ಹೇಳಿದ್ದಾರೆ.
“ಬ್ಯಾಂಕಿಗೆ ತೊಂದರೆಗಳು ಸಂಭವಿಸಲು ಕಾರಣ ಏನೆಂದು ನಿರ್ಣಯಿಸಲು ನಾನು ಆರ್ಬಿಐಗೆ ಕೇಳಿಕೊಂಡಿದ್ದೇನೆ ಮತ್ತು ಸಮಸ್ಯೆಯನ್ನು ಸೃಷ್ಟಿಸುವಲ್ಲಿ ವಿವಿಧ ವ್ಯಕ್ತಿಗಳು ವಹಿಸಿರುವ ಪಾತ್ರಗಳನ್ನು ಸ್ಪಷ್ಟವಾಗಿ ಗುರುತಿಸಲು ನಾನು ಸೂಚಿಸಿದ್ದೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.