ಕೊಯಮತ್ತೂರು: ತಮ್ಮ ತಲೆ ಕೂದಲು ಕಳೆದುಕೊಂಡಿರುವ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ಪ್ರಯತ್ನದ ಭಾಗವಾಗಿ ತಮಿಳುನಾಡಿನ ಕೊಯಮತ್ತೂರಿನ ಖಾಸಗಿ ಕಾಲೇಜಿನ 80 ಬಾಲಕಿಯರು ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ಬಳಸಲಾಗುತ್ತದೆ.
ಅನೇಕ ವಿದ್ಯಾರ್ಥಿನಿಯರಿಗೆ ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ, ಇದೇ ಕಾರಣದಿಂದ ಅವರು ತಮ್ಮ ಕೂದಲನ್ನು ದಾನ ಮಾಡಿದ್ದಾರೆ. ಈ ಮೂಲಕ ಕ್ಯಾನ್ಸರ್ ರೋಗಿಗಳ ಮುಖದಲ್ಲಿ ಸ್ವಲ್ಪ ಸಂತೋಷವನ್ನು ಮೂಡಿಸಲು ತಾವು ಕಿಂಚಿತ್ತು ಪ್ರಯತ್ನವನ್ನು ನಡೆಸಿದ್ದೇವೆ ಎಂಬ ಸಂತೃಪ್ತ ಭಾವ ಅವರಲ್ಲಿ ಮೂಡಿದೆ.
“ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ನನ್ನ ಕೂದಲನ್ನು ದಾನ ಮಾಡಲು ನಾನು ಇಲ್ಲಿದ್ದೇನೆ. ಕ್ಯಾನ್ಸರ್ ರೋಗಿಗಳನ್ನು ಆರ್ಥಿಕವಾಗಿ ಬೆಂಬಲಿಸಲು ಸಾಧ್ಯವಾಗದ ಕಾರಣ ಈ ಆಲೋಚನೆ ನನ್ನ ಮನಸ್ಸಿಗೆ ಬಂದಿತು” ಎಂದು ವಿನೋದಿನಿ ಎಂಬ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
“ನಾವು ಕೂದಲನ್ನು ದಾನ ಮಾಡವಾಗ ಕನಿಷ್ಠ 8 ಇಂಚುಗಳಷ್ಟು ಕತ್ತರಿಸಲಾಗುತ್ತದೆ, ಆದರೆ ನಾನು ಅದಕ್ಕಿಂತ ಹೆಚ್ಚಿನದನ್ನು ದಾನ ಮಾಡಲು ಬಯಸಿದ್ದೇನೆ. ಸುಮಾರು 80 ಸದಸ್ಯರು ಇಲ್ಲಿಯವರೆಗೆ ಕೂದಲು ದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಮುಂದೆ ಇನ್ನೂ ಅನೇಕರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ಸುಮಾರು 200 ಜನರು ಕೂದಲನ್ನು ದಾನ ಮಾಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.