ನವದೆಹಲಿ: ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಹಿನ್ನಲೆಯಲ್ಲಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಹಿಳಾ ಸಾಧಕರಿಗೆ ಪ್ರಶಸ್ತಿ ನೀಡುವುದರಿಂದ ಹಿಡಿದು ಮಹಿಳೆಯರಿಗಾಗಿ ಆರೋಗ್ಯ ಶಿಬಿರಗಳವರೆಗೆ ವಿವಿಧ ಕಾರ್ಯಕ್ರಮಗಳು ಆಯೋಜಿತಗೊಳ್ಳಲಿವೆ.
ಮಹಿಳಾ ದಿನಾಚರಣೆಯ ಅಂಗವಾಗಿ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ‘ನಿಶಾಂಕ್ ’ ಅವರು ಗುರುವಾರ ತಮ್ಮ ಸಚಿವಾಲಯದ ಮಹಿಳಾ ಉದ್ಯೋಗಿಗಳನ್ನು ಸನ್ಮಾನಿಸಿದರು, ಅಲ್ಲದೇ ಚಿಪ್ಕೊ ಚಳುವಳಿ ಕಾರ್ಯಕರ್ತೆ ಗೌರಾ ದೇವಿ ಅವರ ಸ್ಮರಣಾರ್ಥ ಸಸಿಗಳನ್ನು ನೆಟ್ಟರು.
ಸಚಿವರು ಈ ವಾರ ಮಹಿಳಾ ಉಪಕುಲಪತಿಗಳನ್ನೂ ಭೇಟಿ ಮಾಡಲಿದ್ದಾರೆ. ಆರು ತಿಂಗಳ ಕಾಲ ತರಗತಿಗಳಲ್ಲಿ ಬಾಲಕಿಯರನ್ನೇ ಕ್ಲಾಸ್ ಮಾನಿಟರ್ಗಳಾಗಿ ನಾಮನಿರ್ದೇಶನ ಮಾಡುವಂತೆ ಎಲ್ಲಾ ಶಾಲೆಗಳಿಗೆ ಅವರು ಸೂಚನೆಗಳನ್ನು ನೀಡಿದ್ದಾರೆ. ಅಲ್ಲದೇ, ಶಾಲೆ ತೊರೆದ ತಮ್ಮ ಗ್ರಾಮದ 700 ಮಕ್ಕಳನ್ನು ವಾಪಾಸ್ ಶಾಲೆಗೆ ತೆರಳುವಂತೆ ಮಾಡಿದ 16 ವರ್ಷದ ಬಾಲಕಿಯೊಂದಿಗೆ ಸಚಿವರು ಸಂವಹನವನ್ನೂ ನಡೆಸಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಇತರ ಸಚಿವಾಲಯಗಳೊಂದಿಗೆ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದೆ. ಭಾನುವಾರ, ಆಯ್ದ ಮಹಿಳಾ ಸಾಧಕಿ ಪ್ರಧಾನಿ ನರೇಂದ್ರ ಮೋದಿಯವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲಿದ್ದಾರೆ,
ಗುರುವಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಯುನಿಸೆಫ್ ಇಂಡಿಯಾದೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ ಮತ್ತು ಹೆಣ್ಣು ಮಕ್ಕಳ ಜನನಗಳನ್ನು ಉತ್ತೇಜಿಸಲು ಆಯ್ದ ಜಿಲ್ಲೆಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಘೋಷಣೆಯನ್ನು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.