ಚೆನ್ನೈ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಮದ್ರಾಸ್ ಸಂಶೋಧಕರು ಮಾರಕ ಡ್ರೋನ್ಗಳನ್ನು ಸಮರ್ಥವಾಗಿ ಎದುರಿಸಬಲ್ಲ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಐಐಟಿ ಮದ್ರಾಸ್ ಹೇಳಿಕೆಯಲ್ಲಿ ಗುರುವಾರ ತಿಳಿಸಿದೆ.
ಈ ಡ್ರೋನ್ಗಳು ನಮ್ಮ ದೇಶಕ್ಕೆ ಮಾರಕವಾಗಿರುವಂತಹ ಡ್ರೋನ್ಗಳನ್ನು ಹ್ಯಾಕ್ ಮಾಡಿ, ಅವುಗಳನ್ನು ನಿಷ್ಕ್ರಿಯಗೊಳಿಸಬಲ್ಲವು.
ನಮ್ಮ ನಿರ್ಣಾಯಕ ನಾಗರಿಕ ಮತ್ತು ಮಿಲಿಟರಿ ಸ್ಥಾಪನೆಗಳ ಮೇಲೆ ಮಾರಕ ಡ್ರೋನ್ಗಳು ಕಣ್ಗಾವಲು ಇಡುವುದನ್ನು ತಪ್ಪಿಸಲು ನಮ್ಮ ಸಂಶೋಧಕರು ಅಭಿವೃದ್ಧಿಪಡಿಸಿದ ಡ್ರೋನ್ ಕಾನೂನು ಜಾರಿ ಮತ್ತು ಭದ್ರತಾ ಸಂಸ್ಥೆಗಳು ಮತ್ತು ಸಶಸ್ತ್ರ ಪಡೆಗಳಿಗೆ ಸಹಾಯ ಮಾಡಲಿದೆ ಎಂದು ಐಐಟಿ ಹೇಳಿಕೊಂಡಿದೆ.
“ಈ ಡ್ರೋನ್ಗಳು ಮಾರಕ ಡ್ರೋನ್ಗಳನ್ನು ಸುಲಭವಾಗಿ ಪತ್ತೆಹಚ್ಚಬಲ್ಲದು, ಅವುಗಳ ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್ ಅನ್ನು ಹ್ಯಾಕ್ ಮಾಡಬಲ್ಲವು, ಇದರಿಂದ ಮಾರಕ ಡ್ರೋನ್ಗಳು ತನ್ನ ಹಾರಾಟದ ಮಾರ್ಗವನ್ನು ಬದಲಾಯಿಸುವುದು ಅಥವಾ ಸುರಕ್ಷಿತವಾಗಿ ಇಳಿಯುವುದು ಅನಿವಾರ್ಯವಾಗುತ್ತದೆ” ಎಂದಿದೆ.
ಐಐಟಿ ಮದ್ರಾಸ್ ಪ್ರಕಾರ, ಈ ಡ್ರೋನ್ ಅನ್ನು ಇಂಟರ್ನೆಟ್ ಮೂಲಕ ನಿಯಂತ್ರಿಸಬಹುದು ಮತ್ತು ಅಸ್ತಿತ್ವದಲ್ಲಿರುವ ಹೆಚ್ಚಿನ ಡ್ರೋನ್ಗಳಿಗೆ ಹೋಲಿಸಿದರೆ ಸ್ವಾಯತ್ತವಾಗಿ ಇದು ಸಂಚರಿಸಬಲ್ಲದು. ಆಪರೇಟರ್ ಈ ಡ್ರೋನ್ ಅನ್ನು ತಮ್ಮ ದೃಷ್ಟಿಗೋಚರದಲ್ಲಿ ಇಟ್ಟುಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.