ನವದೆಹಲಿ: ಕೊರೋನವೈರಸ್ ಭೀತಿಯಿಂದಾಗಿ ದೆಹಲಿಯಲ್ಲಿ ಹ್ಯಾಂಡ್ ಸ್ಯಾನಿಟೈಝರ್ ಮತ್ತು ಫೇಸ್ ಮಾಸ್ಕ್ಗಳಿಗೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಫೇಸ್ ಮಾಸ್ಕ್ಗಳ ಬೆಲೆ ಗಗನಮುಖಿಯಾದರೆ, ಹ್ಯಾಂಡ್ ಸ್ಯಾನಿಟೈಝರ್ಗಳು ಲಭ್ಯವಿಲ್ಲದ ಸ್ಥಿತಿಗೆ ತಲುಪಿದೆ.
“ಹ್ಯಾಂಡ್ ಸ್ಯಾನಿಟೈಝರ್ಗಳು ಮಾರುಕಟ್ಟೆಯಿಂದ ಕಣ್ಮರೆಯಾಗಿವೆ. ಅದಕ್ಕಾಗಿ ನಾವು ಹೊಸ ಆರ್ಡರ್ಗಳನ್ನು ನೀಡಿದ್ದೇವೆ ಆದರೆ ಅವುಗಳನ್ನು ಪಡೆಯುವುದು ಕಷ್ಟ. ಈ ಹಿಂದೆ 50-60 ರೂ.ಗೆ ಮಾರಾಟವಾಗುತ್ತಿದ್ದ ಫೇಸ್ ಮಾಸ್ಕ್ಗಳನ್ನು ಈಗ 100-150 ರೂ.ಗೆ ಮಾರಾಟ ಮಾಡಲಾಗುತ್ತಿದೆ” ಎಂದು ಮೆಡಿಕಲ್ ಶಾಪ್ ಮಾಲಿಕ ಶುಭಮ್ ಹೇಳುತ್ತಾರೆ.
ಮಾರುಕಟ್ಟೆಯಲ್ಲಿ ಮಾಸ್ಕ್ ಪಡೆಯಲು ಸಾಧ್ಯವಾಗದ ಜನರು ತಮ್ಮ ಕರವಸ್ತ್ರವನ್ನು ಮುಖಕ್ಕೆ ಕಟ್ಟಿಕೊಂಡು ಸುತ್ತಾಡುತ್ತಿದ್ದಾರೆ. ಕೆಲವರು ಜನದಟ್ಟಣೆಯ ಸ್ಥಳಕ್ಕೆ ಭೇಟಿ ನೀಡುವುದನ್ನೇ ಕಡಿಮೆ ಮಾಡಿದ್ದಾರೆ.
“ನಾನು ಮಾಸ್ಕ್ ಖರೀದಿಸಲು ಇಲ್ಲಿಗೆ ಬಂದಿದ್ದೇನೆ ಆದರೆ ಅಂಗಡಿಯವರು ಅವುಗಳು ಖಾಲಿಯಾಗಿವೆ ಎನ್ನುತ್ತಿದ್ದಾರೆ, ಹಾಗಾಗಿ ನಾನು ಕರವಸ್ತ್ರವನ್ನು ಮುಖಕ್ಕೆ ಕಟ್ಟಿದ್ದೇನೆ. ಕೊರೋನವೈರಸ್ ತುಂಬಾ ಮಾರಕವಾಗಿದ್ದು ಜನರು ಕೈಕುಲುಕಲು ಹೆದರುತ್ತಿದ್ದಾರೆ ಮತ್ತು ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ” ಎಂದು ದೆಹಲಿ ನಿವಾಸಿಯೊಬ್ಬರು ಹೇಳಿದ್ದಾರೆ.
”ಭಾರತದಲ್ಲಿ ಕೊರೋನವೈರಸ್ ಪತ್ತೆಯಾಗಿರುವುದರಿಂದ ಜನರಲ್ಲಿ ಭೀತಿ ಇದೆ, ಇದು ಮಾಸ್ಕ್ಗಳು ಮತ್ತು ಸ್ಯಾನಿಟೈಝರ್ಗಳ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ ಮತ್ತು ಪೂರೈಕೆ ಕುಂಠಿತವಾಗಿದೆ” ರಸಾಯನಶಾಸ್ತ್ರಜ್ಞ ಮೋಹಿತ್ ಗೋಯಲ್ ಹೇಳುತ್ತಾರೆ
”50-60 ರೂ.ಗೆ ಮಾರಾಟವಾಗುತ್ತಿದ್ದ ಎನ್ -95 ಮುಖವಾಡಗಳು ಈಗ 280-300 ರೂ.ಗೆ ಮಾರಾಟವಾಗುತ್ತಿದೆ”ಎಂದು ಮೋಹಿತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.