ನವದೆಹಲಿ: 2014 ರಿಂದ 15,036 ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐದು ನೆರೆಯ ರಾಷ್ಟ್ರಗಳ ಸುಮಾರು 19,000 ಜನರಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ರಾಜ್ಯಸಭೆಗೆ ಬುಧವಾರ ಕೇಂದ್ರ ಮಾಹಿತಿಯನ್ನು ನೀಡಿದೆ.
ಭಾರತೀಯ ಪೌರತ್ವ ಪಡೆದವರು ಬಾಂಗ್ಲಾದೇಶ, ಪಾಕಿಸ್ಥಾನ, ಮಯನ್ಮಾರ್, ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನಕ್ಕೆ ಸೇರಿದವರು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಹೇಳಿದ್ದಾರೆ.
ಭಾರತೀಯ ಪೌರತ್ವ ಪಡೆದ 18,999 ಜನರಲ್ಲಿ ಒಟ್ಟು 15,036 ಜನರು ಬಾಂಗ್ಲಾದೇಶದವರು ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಭಾರತ-ಬಾಂಗ್ಲಾದೇಶದ ಭೂ ಗಡಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ 1955 ರಲ್ಲಿ ಪೌರತ್ವ ಕಾಯ್ದೆ 1955 ರ ಸೆಕ್ಷನ್ 7 ರ ಅಡಿಯಲ್ಲಿ ಅತಿ ಹೆಚ್ಚು ಸಂಖ್ಯೆಯ 14,864 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡಲಾಯಿತು.
2014 ರಿಂದ 2019 ರವರೆಗೆ ಒಟ್ಟು 2,935 ಪಾಕಿಸ್ಥಾನಿ, 914 ಅಫ್ಘಾನ್ ಮತ್ತು 113 ಶ್ರೀಲಂಕಾದ ನಾಗರಿಕರು ಮತ್ತು ಒಬ್ಬ ಮಯನ್ಮಾರ್ ಪ್ರಜೆಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ರಾಯ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.