ನವದೆಹಲಿ: ಬ್ಯಾಟ್ಸ್ವುಮನ್ಗಳಿಗಾಗಿ ಐಸಿಸಿ T20I ಶ್ರೇಯಾಂಕವನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಾರೆ ಶಿಫಾಲಿ ವರ್ಮಾ ಅವರ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. 16 ವರ್ಷದ ಈ ಆಟಗಾರ್ತಿ ಐಸಿಸಿ T20I ಶ್ರೇಯಾಂಕದಲ್ಲಿ ಕಾಣಿಸಿಕೊಂಡ ಅತೀ ಕಿರಿಯ ಆಟಗಾರ್ತಿಯೂ ಹೌದು. ಮಿಥಾಲಿ ರಾಜ್ ನಂತರ ಐಸಿಸಿ ಶ್ರೇಯಾಂಕದಲ್ಲಿ ನಂ .1 ಸ್ಥಾನವನ್ನು ಪಡೆದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಈಕೆ ಪಾತ್ರರಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಸಿಸಿ ಮಹಿಳಾ ಟಿ 20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ನಂತರ ಶಿಫಾಲಿ ವರ್ಮಾ 19 ಸ್ಥಾನಗಳ ಜಿಗಿತವನ್ನು ಕಂಡು ಅಗ್ರಸ್ಥಾನವನ್ನು ತಲುಪಿದ್ದಾರೆ. ಶಿಫಾಲಿ ವರ್ಮಾ ಅವರ ಉತ್ತಮ ಪ್ರದರ್ಶನಗಳು ಅವರಿಗೆ ಅಗ್ರ ಸ್ಥಾನವನ್ನು ನೀಡಿದೆ.
ಶಿಫಾಲಿ ವರ್ಮಾ ಅವರು 2019 ರ ನವೆಂಬರ್ನಲ್ಲಿ ಟಿ20Iಗೆ ಪಾದಾರ್ಪಣೆ ಮಾಡಿದರು, ಆ ಬಳಿಕ ಈಕೆ ಹಿಂದಿರುಗಿ ನೋಡಲೇ ಇಲ್ಲ. ಅತೀ ಚಿಕ್ಕ ವಯಸ್ಸಿನಲ್ಲೇ ಈ ಬ್ಯಾಟ್ಸ್ವುಮನ್ ಭಾರತ ಮಹಿಳಾ ತಂಡದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ.
ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರಂತೆಯೇ ಬ್ಯಾಟಿಂಗ್ ಶೈಲಿಯನ್ನು ಹೊಂದಿರುವ ಈಕೆ ಪ್ರತಿಸ್ಪರ್ಧಿಯ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ಬೌಲರ್ ಅನ್ನು ವಿಚಲಿತಗೊಳಿಸುತ್ತಾರೆ. ಟಿ20ಯಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ 161 ರನ್ ಗಳಿಸಿದ ಶಫಾಲಿ ವರ್ಮಾ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಮೂರನೇ ಸ್ಥಾನದಲ್ಲಿದ್ದು, ಭಾರತ ಮಹಿಳಾ ತಂಡವನ್ನು ಸೆಮಿಫೈನಲ್ಗೆ ಮುನ್ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.