ನವದೆಹಲಿ: ವಿಶ್ವದ ಜನಪ್ರಿಯ ಪ್ರವಾಸಿ ತಾಣವಾಗಿ ಭಾರತವನ್ನು ಪ್ರಸ್ತುತಪಡಿಸುವ ಗುರಿಯೊಂದಿಗೆ, ವಿವಿಧ ದೇಶಗಳ ಪ್ರವಾಸಿಗರನ್ನು ಭಾರತಕ್ಕೆ ಆಕರ್ಷಿಸಲು ಇನ್ಕ್ರೆಡಿಬಲ್ ಇಂಡಿಯಾ ವೆಬ್ಸೈಟ್ ಅನ್ನು ಅರೇಬಿಕ್, ಚೈನೀಸ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರಾರಂಭಿಸಲಾಗಿದೆ.
ವೆಬ್ಸೈಟ್ಗೆ ಚಾಲನೆಯನ್ನು ನೀಡಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು, “ಭಾರತದ ವಿವಿಧ ಪ್ರವಾಸೋದ್ಯಮ ಉತ್ಪನ್ನಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವುದು ಮತ್ತು ಪ್ರವಾಸಿಗರಿಗೆ ವೈಯಕ್ತಿಕ ಮತ್ತು ಸಂದರ್ಭೋಚಿತ ಡಿಜಿಟಲ್ ಅನುಭವವನ್ನು ಒದಗಿಸುವ ಮೂಲಕ ಪ್ರವಾಸೋದ್ಯಮದ ಬಗ್ಗೆ ಜಾಗೃತಿ, ಆಕರ್ಷಣೆಗಳು ಮತ್ತು ಅವಕಾಶಗಳನ್ನು ಹೆಚ್ಚಿಸುವುದು ಬಹುಭಾಷಾ ವೆಬ್ಸೈಟ್ನ ಉದ್ದೇಶವಾಗಿದೆ” ಎಂದಿದ್ದಾರೆ.
“ಇಂದು ಇನ್ಕ್ರೆಡಿಬಲ್ ಇಂಡಿಯಾ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಚೈನೀಸ್, ಅರೇಬಿಕ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಭಾಷೆಗಳನ್ನು ಮಾತನಾಡುವ ದೇಶಗಳಲ್ಲಿನ ಪ್ರವಾಸಿ ಪ್ರಿಯರೊಂದಿಗೆ ವೆಬ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳ ಮೂಲಕ ಪರಿಣಾಮಕಾರಿಯಾಗಿ ಸಂಪರ್ಕ ಸಾಧಿಸುವುದು ಇದರ ಮುಖ್ಯ ಉದ್ದೇಶ. ಈ ಮೂಲಕ ಉತ್ತಮ ಸಂಪರ್ಕವನ್ನು ಸ್ಥಾಪಿಸುವುದು” ಎಂದಿದ್ದಾರೆ.
ಶ್ರೀಲಂಕಾದಿಂದ ಸಾಂಚಿಗೆ ಪ್ರವಾಸಿಗರು ಹರಿದು ಬರುವುದನ್ನು ಗಮನದಲ್ಲಿಟ್ಟುಕೊಂಡು, ಸಿಂಚಲ ಭಾಷೆಯನ್ನು ಸಾಂಚಿಯಲ್ಲಿ ನಾವು ಸಂಕೇತವಾಗಿ ಪರಿಚಯಿಸಿದ್ದೇವೆ ಎಂದಿದ್ದಾರೆ.
ಕೆಲವೊಂದು ಪ್ರವಾಸಿ ತಾಣಗಳಲ್ಲಿ ಫ್ರೆಂಚ್, ರಷ್ಯನ್ ಮತ್ತು ಚೈನೀಸ್ ಭಾಷೆಗಳನ್ನು ಸಹ ಬಳಸುವ ಚಿಂತನೆಯನ್ನು ನಡೆಸಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.