ದೆಹಲಿಯಲ್ಲಿ ಇತ್ತೀಚಿಗೆ ನಡೆದ ಗಲಭೆಗಳು ಪೂರ್ವನಿಯೋಜಿತವೇ? ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ವಾರದ ಮೊದಲು ದೇಶದ್ರೋಹದ ಆರೋಪವನ್ನು ಹೊತ್ತಿರುವ, ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮಾಡಿದ ಭಾಷಣ ದೆಹಲಿ ಹಿಂಸಾಚಾರದ ಹಿಂದಿನ ಕರಾಳ ಸತ್ಯವನ್ನು ಬಹಿರಂಗಪಡಿಸಿದೆ.
ಫೆಬ್ರವರಿ 24 ಮತ್ತು 25 ರಂದು ರಾಷ್ಟ್ರ ರಾಜಧಾನಿ ಹಿಂಸಾತ್ಮಕ ಗಲಭೆಗಳಿಂದ ತತ್ತರಿಸಿ ಹೋಗಿತ್ತು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಗೆ ಮುಂಚೆಯೇ ಉದ್ವಿಗ್ನತೆಗಳು ಕ್ಷಿಪ್ರವಾಗಿ ಬೆಳೆದವು, ಅಂತಿಮವಾಗಿ ಟ್ರಂಪ್ ನವದೆಹಲಿಗೆ ಭೇಟಿ ನೀಡಿದಾಗ ಈ ಉದ್ವಿಗ್ನತೆ ಪೂರ್ಣ ಪ್ರಮಾಣದ ಗಲಭೆಗಳಾಗಿ ಆಕಾರವನ್ನು ಪಡೆದುಕೊಂಡವು.
ಇದೀಗ ಉಮರ್ ಖಲೀದ್ ಹಿಂಸಾಚಾರಕ್ಕೂ ಮೊದಲು ಮಾಡಿದ್ದ ಭಾಷಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಮೆರಿಕಾ ಅಧ್ಯಕ್ಷರು ದೆಹಲಿಗೆ ಭೇಟಿ ನೀಡಿದಾಗ ಪ್ರತಿಭಟನೆಯನ್ನು ತೀಕ್ಷ್ಣಗೊಳಿಸುವಂತೆ ಮುಸ್ಲಿಂ ಜನಸಮೂಹವನ್ನು ಈತ ಪ್ರಚೋದಿಸಿದ್ದಾನೆ. ‘ತುಕ್ಡೆ ತುಕ್ಡೆ’ ಗ್ಯಾಂಗ್ ಕಾರ್ಯಕರ್ತನಾಗಿರುವ ಈತ ಟ್ರಂಪ್ ಮುಂದೆ ಭಾರತದ ಮಾನ ಹರಾಜು ಹಾಕಲು ಯತ್ನಿಸಿದ್ದಾನೆ.
ಈ ಬಗೆಗಿನ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ತುಣುಕಿನಲ್ಲಿ ಖಲೀದ್, “ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ರಂದು ಭಾರತಕ್ಕೆ ಭೇಟಿ ನೀಡುವಾಗ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ದೇಶವನ್ನು ವಿಭಜಿಸಲು ಮತ್ತು ನಮ್ಮ ತತ್ವಗಳಿಗೆ ಕಳಂಕ ತರಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ನಾವು ತೋರಿಸುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ಭಾರತದ ಜನರು ಎಲ್ಲರನ್ನೂ ಒಂದುಗೂಡಿಸಲು ಹೋರಾಡುತ್ತಿದ್ದಾರೆ ಎಂದು ಟ್ರಂಪ್ಗೆ ಹೇಳಲು ನಾವು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿಯುತ್ತೇವೆ” ಎಂದಿದ್ದಾನೆ. ಫೆಬ್ರವರಿ 17 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಸಮಾವೇಶದಲ್ಲಿ ಈತ ಈ ಭಾಷಣವನ್ನು ಮಾಡಿದ್ದಾನೆ.
ಈ ವೀಡಿಯೊವನ್ನು ಟ್ವೀಟ್ ಮಾಡಿರುವ ಬಿಜೆಪಿ ಸೋಷಿಯಲ್ ಮೀಡಿಯಾ ಮುಖ್ಯಸ್ಥರು, “ಈಗಾಗಲೇ ದೇಶದ್ರೋಹ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಅವರು ಫೆಬ್ರವರಿ 17 ರಂದು ಅಮರಾವತಿಯಲ್ಲಿ ಭಾಷಣ ಮಾಡಿದ್ದರು, ಅಲ್ಲಿ ಟ್ರಂಪ್ ಭಾರತಕ್ಕೆ ಬಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಪ್ರತಿಭಟನಾಕಾರರು ಬೀದಿಗಿಳಿಯುವಂತೆ ಅವರು ಪ್ರಚೋದಿಸಿದ್ದರು. ದೆಹಲಿಯಲ್ಲಿನ ಹಿಂಸಾಚಾರವು ತುಕ್ಡೆ ತುಕ್ಡೆ ಗ್ಯಾಂಗ್ನಿಂದ ವಾರಗಳ ಮುಂಚಿತವಾಗಿ ಯೋಜಿಸಲ್ಪಟ್ಟಿದೆಯೇ? ಎಂಬ ಅನುಮಾನ ಕಾಡುತ್ತಿದೆ” ಎಂದಿದ್ದಾರೆ.
Umar Khalid, already facing sedition charges, gave a speech in Amaravati on 17Feb, where he exhorted a largely Muslim audience to come out on streets in huge numbers when Trump arrives in India on 24th.
Was the violence in Delhi planned weeks in advance by the Tukde Tukde gang? pic.twitter.com/feUMwpPeKS
— Amit Malviya (@amitmalviya) March 2, 2020
ಪತ್ರಕರ್ತ ಆಶಿಶ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ 17 ನಿಮಿಷಗಳ ಸುದೀರ್ಘ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ವೀಡಿಯೊದುದ್ದಕ್ಕೂ, ಉಮರ್ ಖಾಲಿದ್ ಹಲವಾರು ಪ್ರಚೋದನಕಾರಿ, ದಾರಿತಪ್ಪಿಸುವ ಟೀಕೆಗಳನ್ನು ಮಾಡಿದ್ದಾನೆ. ಪೋಲಿಸ್ ದೌರ್ಜನ್ಯ ಎಂಬ ಕಾಲ್ಪನಿಕ ಹೇಳಿಕೆಗಳೊಂದಿಗೆ ಮುಸ್ಲಿಂರನ್ನು ಪ್ರಚೋದಿಸುವ, ಆ ಮೂಲಕ ಹಿಂದೂಫೋಬಿಯಾ ಹರಡುವ ಕಾರ್ಯ ಮಾಡಿದ್ದಾನೆ. ಶಾಹೀನ್ ಬಾಗ್ ಪ್ರತಿಭಟನೆಯನ್ನು ಆತ ಸಮರ್ಥಿಸಿಕೊಂಡಿದ್ದಾನೆ.
ಅಯೋಧ್ಯೆ ತೀರ್ಪನ್ನು ಕೂಡ ಆತ ಉಲ್ಲೇಖಿಸಿದ್ದಾನೆ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮುಸ್ಲಿಮರು ದಂಗೆ ಏಳಲಿಲ್ಲ ಎಂದು ವಾದಿಸಿದ್ದಾನೆ. ಜನಸಮೂಹವನ್ನು ಪ್ರಚೋದಿಸುವ ಮತ್ತು ದಾರಿತಪ್ಪಿಸುವ ಕಾರ್ಯವನ್ನು ಭಾಷಣದುದ್ದಕ್ಕೂ ಮಾಡಿಕೊಂಡು ಬಂದಿರುವ ಅವರು, ಮುಸ್ಲಿಮರಿಗೆ ಹಾನಿ ಮಾಡಲು ಮೋದಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ತಂದಿದೆ ಎಂದು ಹೇಳಿದ್ದಾನೆ. ಒಂದೇ ಒಂದು ಬಾರಿ ಕೂಡ ಆತ ಸಿಎಎ ಭಾರತೀಯ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಉಲ್ಲೇಖಿಸಿಲ್ಲ.
ಖಾಲಿದ್ ಮಾಡಿದ ಭಾಷಣ ಮತ್ತು ದೆಹಲಿ ದಂಗೆಗೆ ಸಂಪರ್ಕ ಇರುವುದನ್ನು ನಾವು ಸುಲಭವಾಗಿ ಊಹೆ ಮಾಡಬಹುದು. ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಮುನ್ನಾದಿನದಂದು, ಈಶಾನ್ಯ ದೆಹಲಿಯಲ್ಲಿ ಜಾಫರ್ ಬಾದ್, ಮೌಜ್ಪುರ್, ಚಾಂದ್ ಬಾಗ್ ಮತ್ತು ಖುರೇಜಿಯಂತಹ ಪ್ರದೇಶಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಭುಗಿಲೆದ್ದಿತ್ತು. ರಸ್ತೆ ತಡೆ ಮತ್ತು ಹಿಂಸಾಚಾರಗಳು ನಡೆದವು. ಹಲವು ಪ್ರದೇಶಗಳು ಗಲಭೆಗಳು ಮತ್ತು ಹಿಂಸಾಚಾರದ ಕೇಂದ್ರಬಿಂದುವಾಗಿದ್ದವು.
“ದೆಹಲಿಯ ಕೆಲವು ಭಾಗಗಳಲ್ಲಿನ ಹಿಂಸಾಚಾರವು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಹೊಂದಿಕೆಯಾಗುವಂತೆ ತೋರುತ್ತದೆ. ದೆಹಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಗೃಹಸಚಿವಾಲಯ ಅವರ ಜೊತೆ ಸಂಪರ್ಕದಲ್ಲಿದೆ” ಎಂದು ಮೂಲಗಳು ನಂತರ ಬಹಿರಂಗಪಡಿಸಿದವು.
ಪ್ರತಿಭಟನೆಗಳು ಮತ್ತು ರಸ್ತೆ ತಡೆಗಳು ಮತ್ತು ಗಲಭೆಗಳ ನಡುವಿನ ನಿಸ್ಸಂದಿಗ್ಧವಾದ ಸಂಬಂಧವನ್ನು ಸುಲಭವಾಗಿ ಅಳೆಯಬಹುದು, ಇವೆಲ್ಲವನ್ನೂ ಒಂದು ವಿಶಾಲ ಯೋಜನೆಯಂತೆ ಆಯೋಜಿಸಲಾಗಿದೆ. ಆ ಯೋಜನೆಯೇ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ಸಂದರ್ಭ.
ಗಲಭೆಯ ಸಮಯದಲ್ಲೇ, ಗಲಭೆಗೆ ನಿಖರವಾದ ಯೋಜನೆಯನ್ನು ರೂಪಿಸಲಾಗಿತ್ತು ಎಂಬುದು ಸ್ಪಷ್ಟವಾಗಿದೆ. ಹಲವು ಬುಲೆಟ್ ಗಾಯಗಳು, ಬುಲೆಟ್ ಗಾಯಗಳಿಂದಾಗಿ ಪೊಲೀಸ್ ಕಾನ್ಸ್ಟೆಬಲ್ ಸಾವು, ಶಾರುಖ್ ಎಂಬ ದಂಗೆಕೋರನಿಂದ ದೆಹಲಿ ಪೊಲೀಸರ ಮೇಲೆ ಎಂಟು ಸುತ್ತಿನ ಗುಂಡುಗಳ ಹಾರಾಟ, ಗುಂಡು ಹಾರಿಸಿದ ದೃಶ್ಯಗಳು ಮತ್ತು ತಾಹಿರ್ ಹುಸೇನ್ ಮನೆಯಲ್ಲಿ ಸಿಕ್ಕ ಪೆಟ್ರೋಲ್ ಬಾಂಬ್ಗಳು- ಇವೆಲ್ಲವೂ ಗಲಭೆಯ ವಿಸ್ತಾರವಾದ ಯೋಜನೆ ಮತ್ತು ಸಿದ್ಧತೆಯನ್ನು ಬಹಿರಂಗಪಡಿಸುತ್ತವೆ.
ಗಲಭೆಗೆ ನಿಜವಾದ ಸಿದ್ಧತೆಗಳು ಒಂದು ವಾರ ಮುಂಚಿತವಾಗಿ ಪ್ರಾರಂಭವಾಗಿರಬಹುದು ಎಂದು ಖಾಲಿದ್ ಭಾಷಣದಿಂದ ತಿಳಿದು ಬರುತ್ತದೆ. ಖಲೀದ್ನಂತಹ ಭಾರತ ವಿರೋಧಿ ಇಸ್ಲಾಮಿಕ್ಗಳು ದೆಹಲಿ ಗಲಭೆಗಳನ್ನು ಪ್ರಚೋದಿಸುವ ಮೂಲಕ ಹಿಂದೂಗಳು ಮತ್ತು ಭಾರತದ ಚಿತ್ರಣವನ್ನು ಕೆಡಿಸುವ ಅವಕಾಶವನ್ನು ಕಂಡುಕೊಂಡರು. ಆತನ ಕಿಚ್ಚು ಹತ್ತಿಸುವ ಹೇಳಿಕೆಯು ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿದ್ದು, ಇದು ದೆಹಲಿ ಗಲಭೆಗಳಿಗೆ ಕಾರಣವಾದ ಘಟನೆಗಳ ಸ್ಪಷ್ಟ ಅಂಶಗಳನ್ನು ಬಿಚ್ಚಿಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.