ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಸಾಮಾಜಿಕ ಜಾಲತಾಣವನ್ನು ಈ ಭಾನುವಾರ ಬಿಡುವುದಾಗಿ ಟ್ವೀಟ್ ಮಾಡಿದ್ದರು. ಇಡೀ ದೇಶವೇ ಇದರ ಮರ್ಮ ಏನಿರಬಹುದು ಎಂದು ಚರ್ಚೆಯಲ್ಲಿ ತೊಡಗಿಕೊಂಡಿತ್ತು. ಇದೀಗ ಮೋದಿ ತಮ್ಮ ಟ್ವಿಟ್ ಮರ್ಮವನ್ನು ಖುದ್ದಾಗಿ ಬಹಿರಂಗಪಡಿಸಿದ್ದಾರೆ.
ಮಾರ್ಚ್ 8 ಭಾನುವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿದೆ. ಹೀಗಾಗಿ ಆ ದಿನ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಸಾಧಕ, ಪ್ರೇರಣಾದಾಯಕ ಮಹಿಳೆಗೆ ನೀಡಲು ಅವರು ನಿರ್ಧರಿಸಿದ್ದಾರೆ. ಕೋಟ್ಯಾಂತರ ಜನರಿಗೆ ಇದರಿಂದ ಪ್ರೇರಣೆ ಸಿಗುತ್ತದೆ ಎಂಬುದು ಮೋದಿಯ ಅಭಿಪ್ರಾಯವಾಗಿದೆ.
ಈ ಬಗ್ಗೆ ಇಂದು ಟ್ವಿಟ್ ಮಾಡಿರುವ ಮೋದಿಯವರು, “ಈ ಮಹಿಳಾ ದಿನದಂದು, ತನ್ನ ಜೀವನ ಮತ್ತು ಕೆಲಸದ ಮೂಲಕ ನಮಗೆ ಸ್ಫೂರ್ತಿ ನೀಡಿದ ಮಹಿಳೆಗೆ ನಾನು ನನ್ನ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನೀಡುತ್ತಿದ್ದೇನೆ. ಇದು ಲಕ್ಷಾಂತರ ಜನರಿಗೆ ಪ್ರೇರಣೆಯನ್ನು ನೀಡಲು ಅವರಿಗೆ ಸಹಾಯ ಮಾಡುತ್ತದೆ. ನೀವು ಅಂತಹ ಮಹಿಳೆಯಾಗಿದ್ದೀರಾ ಅಥವಾ ಅಂತಹ ಸ್ಫೂರ್ತಿದಾಯಕ ಮಹಿಳೆಯರ ಬಗ್ಗೆ ನಿಮಗೆ ತಿಳಿದಿದೆಯೇ? #SheInspiresU ಹ್ಯಾಶ್ಟ್ಯಾಗ್ ಬಳಸಿಕೊಂಡು ಅಂತಹ ವಿವರಗಳನ್ನು ಹಂಚಿಕೊಳ್ಳಿ” ಎಂದಿದ್ದಾರೆ.
ಒಂದು ಟ್ವಿಟ್ ಮೂಲಕ ಇಡೀ ದೇಶವನ್ನೇ ಚಿಂತನೆಗೆ ಹಚ್ಚಿದ ಮೋದಿ, ಇಂದು ಮಹಿಳೆಯರಿಗೆ ಪ್ರೇರಣೆ ನೀಡುವಂತಹ ಕಾರ್ಯವನ್ನು ನಮ್ಮ ಮುಂದಿಟ್ಟಿದ್ದಾರೆ.
This Women’s Day, I will give away my social media accounts to women whose life & work inspire us. This will help them ignite motivation in millions.
Are you such a woman or do you know such inspiring women? Share such stories using #SheInspiresUs. pic.twitter.com/CnuvmFAKEu
— Narendra Modi (@narendramodi) March 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.