ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚಿತ್ತರಂಜನ್ನಲ್ಲಿರುವ ಭಾರತೀಯ ರೈಲ್ವೆಯ ಲೊಕೋಮೋಟಿವ್ ಉತ್ಪಾದನಾ ಘಟಕವು ಒಂದು ವರ್ಷದಲ್ಲಿ ಅತಿ ಹೆಚ್ಚು ಲೋಕೋಮೋಟಿವ್ಗಳನ್ನು ತಯಾರಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಾಣ ಮಾಡಿದೆ.
ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್ (ಸಿಎಲ್ಡಬ್ಲ್ಯು) 2018-19ರ ಆರ್ಥಿಕ ವರ್ಷದಲ್ಲಿ ಒಟ್ಟು 402 ಲೋಕೋಮೋಟಿವ್ಗಳನ್ನು ತಯಾರಿಸಿದ್ದು, ಆ ಮೂಲಕ ಒಂದು ವರ್ಷದ ಹಿಂದೆ ತಯಾರಿಸಿದ 350 ಲೋಕೋಮೋಟಿವ್ಗಳ ದಾಖಲೆಯನ್ನು ಮುರಿಯಿತು.
2018-19ರ ಆರ್ಥಿಕ ವರ್ಷದಲ್ಲಿ ಒಟ್ಟು 402 ಲೊಕೋಮೋಟಿವ್ಗಳನ್ನು ಉತ್ಪಾದಿಸಿದ್ದು ವಿಶ್ವದ ಅತಿ ಹೆಚ್ಚು ಲೋಕೋಮೋಟಿವ್ ಉತ್ಪಾದನಾ ದಾಖಲೆಯಾಗಿದೆ. ಹೀಗಾಗಿ ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಅಧಿಕೃತವಾಗಿ ಸ್ಥಾನ ಪಡೆದುಕೊಂಡಿದೆ.
ಪ್ರಸಕ್ತ ಹಣಕಾಸು ವರ್ಷದ ವಿಷಯಕ್ಕೆ ಬಂದರೆ, ಸಿಎಲ್ಡಬ್ಲ್ಯೂ ಈಗಾಗಲೇ ಜನವರಿ 31 ರೊಳಗೆ 350 ಲೋಕೋಮೋಟಿವ್ಗಳನ್ನು ಹೊರತಂದಿದೆ. ಅಂದರೆ ಅದು ಪ್ರತಿ ತಿಂಗಳು 35 ಲೊಕೋಮೋಟಿವ್ಗಳನ್ನು ಉತ್ಪಾದನೆ ಮಾಡಿದೆ. ಈ ಹಣಕಾಸು ವರ್ಷದ ಅಂತ್ಯಕ್ಕೆ ಸಿಎಲ್ಡಬ್ಲ್ಯೂ 420 ಲೊಕೋಮೋಟಿವ್ಗಳನ್ನು ಉತ್ಪಾದನೆ ಮಾಡುವ ನಿರೀಕ್ಷೆ ಇದೆ. ಈ ಅಂಕಿ ಅಂಶವು ಮತ್ತೊಂದು ಹೊಸ ಉತ್ಪಾದನಾ ದಾಖಲೆಯನ್ನು ರಚಿಸಲಿದೆ.
Heartiest congratulations!!!
Chittaranjan Locomotive Works(CLW) for the recognition by Limca Book of Records for producing 402 electrical locomotives in FY 2018-19, the highest production record in the world. pic.twitter.com/jgWvtyRiNG
— Ministry of Railways (@RailMinIndia) March 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.