ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಸತತ ನಾಲ್ಕು ತಿಂಗಳುಗಳಿಂದ 1 ಲಕ್ಷ ಕೋಟಿ ರೂಪಾಯಿಗಳನ್ನು ದಾಟುತ್ತಿದೆ.
ಫೆಬ್ರವರಿ ತಿಂಗಳಲ್ಲಿ ಸಂಗ್ರಹವು ಒಟ್ಟು 1,05,366 ಕೋಟಿ ರೂ. ಗಳನ್ನು ಮುಟ್ಟಿದೆ, ಪ್ರಮುಖ ರಾಜ್ಯಗಳು ದೃಢವಾದ ಬೆಳವಣಿಗೆಯ ದರವನ್ನು ದಾಖಲಿಸಿದೆ. ಕರ್ನಾಟಕದ ಜಿಎಸ್ಟಿ ಆದಾಯವು ಶೇಕಡಾ 15, ಉತ್ತರ ಪ್ರದೇಶ ಶೇ. 13, ಮಹಾರಾಷ್ಟ್ರದ ಶೇಕಡಾ 12 ಮತ್ತು ಗುಜರಾತ್ನ ಜಿಎಸ್ಟಿ ಆದಾಯವು ಶೇಕಡಾ 11 ರಷ್ಟು ಏರಿಕೆಯಾಗಿದೆ.
ಈ ನಡುವೆ, ಇತರ ಪ್ರಮುಖ ರಾಜ್ಯಗಳಾದ ಹರಿಯಾಣ ಮತ್ತು ತಮಿಳುನಾಡಿನ ಜಿಎಸ್ಟಿ ಆದಾಯವು ವರ್ಷಕ್ಕೆ ಶೇಕಡಾ 8 ರಷ್ಟು ಏರಿಕೆಯಾಗಿದೆ.
ಒಟ್ಟಾರೆಯಾಗಿ, ಸಂಪೂರ್ಣ ಭಾರತದ ಜಿಎಸ್ಟಿ ಸಂಗ್ರಹವು ವರ್ಷದ ಫೆಬ್ರವರಿಯಲ್ಲಿ ಶೇಕಡಾ 12 ರಷ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ. ಅಲ್ಲದೆ, ಆಮದುಗಳಿಂದ ಜಿಎಸ್ಟಿ ಸಂಗ್ರಹಣೆಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ, ವರ್ಷದ ಸಂಗ್ರಹವು ಶೇಕಡಾ 8ರಷ್ಟು ಹೆಚ್ಚಾಗಿದೆ.
ಈ ತಿಂಗಳ ಕೇಂದ್ರ ಜಿಎಸ್ಟಿ ಸಂಗ್ರಹ 20,569 ಕೋಟಿ ರೂ., ರಾಜ್ಯ ಜಿಎಸ್ಟಿ ಸಂಗ್ರಹ 27,348 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್ಟಿ 48,503 ಕೋಟಿ ರೂ. ಮತ್ತು ಸೆಸ್ ಕಲೆಕ್ಷನ್ 8,947 ಕೋಟಿ ರೂ.ಆಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.