ಕೋಟ: ಲೋಕಸಭಾ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರು ಶನಿವಾರ ಸಾಮಾಜಿಕ ಸದುದ್ದೇಶಕ್ಕಾಗಿ ತಮ್ಮ ಲೋಕಸಭಾ ಕ್ಷೇತ್ರ ರಾಜಸ್ಥಾನದ ಕೋಟಾದಲ್ಲಿ ಮಹಿಳೆಯರಿಗೆ ಮತ್ತು ಗರ್ಭಿಣಿಯರಿಗೆ ಪೌಷ್ಠಿಕತೆಯ ಬಲ ತುಂಬುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಈ ಅಭಿಯಾನ ‘ಸುಪೋಶಿತ್ ಮಾ ಅಭಿಯಾನ್’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಅಭಿಯಾನಕ್ಕೆ ಸಾರ್ವಜನಿಕ ಸಹಭಾಗಿತ್ವ ಮತ್ತು ನಾಗರಿಕ ಸಂಸ್ಥೆಗಳು ಹಣವನ್ನು ನೀಡಿವೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡಿದ ಓಂ ಬಿರ್ಲಾ ಅವರು, ”ಗರ್ಭಿಣಿಯರು ಮತ್ತು ಹದಿಹರೆಯದ ಹುಡುಗಿಯರಲ್ಲಿ ಅಪೌಷ್ಟಿಕತೆಯ ಕೊರತೆಯನ್ನು ನೀಗಿಸಲು ಈ ಉಪಕ್ರಮವನ್ನು ಆರಂಭಿಸಲಾಗಿದೆ” ಎಂದಿದ್ದಾರೆ.
ಅಭಿಯಾನವನ್ನು ಪ್ರಾರಂಭಿಸುವ ಮೊದಲು, ಕೋಟಾ ಜಿಲ್ಲೆಯ ಕೊಳೆಗೇರಿ ಪ್ರದೇಶಗಳಲ್ಲಿ 5,000 ಗರ್ಭಿಣಿಯರು ಮತ್ತು ಹೆಣ್ಣು ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭ ಅಪೌಷ್ಟಿಕತೆಯಿಂದ ಬಳಲುತ್ತಿರುವ 1000 ಮಹಿಳೆಯರು ಮತ್ತು ಹುಡುಗಿಯರಿಗೆ ಮುಂದಿನ ಒಂಬತ್ತು ತಿಂಗಳವರೆಗೆ ಉಚಿತ ಪೌಷ್ಠಿಕಾಂಶದ ಕಿಟ್ಗಳನ್ನು ನೀಡಲಾಗುವುದು.
17 ಕೆಜಿಯ ವಿವಿಧ ನ್ಯೂಟ್ರಿಶನ್ ಕಿಟ್ ಅನ್ನು ಈ ಅಭಿಯಾನದಡಿ ನೀಡಲಾಗಿದೆ ಮತ್ತು ಅವರಿಗೆ ಮೆಡಿಕಲ್ ಕಾರ್ಡ್ಸ್ ಅನ್ನು ನೀಡಲಾಗುತ್ತಿದೆ. ಈ ಮೂಲಕ ಅವರ ಆರೋಗ್ಯವನ್ನು ಪ್ರತೀ ತಿಂಗಳು ಪರೀಕ್ಷಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.