ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನ ಮಿಷನ್ಗಾಗಿ ಇಸ್ರೋ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. 2020ರಲ್ಲಿ ಮಿಷನ್ ನಡೆಯಲಿದೆ. ಇದೀಗ ಕ್ರೂ ಎಸ್ಕೇಪ್ ಸಿಸ್ಟಮ್ ಅನ್ನು ಪರೀಕ್ಷಿಸಲು ಇಸ್ರೋ ಹೊಸ ಪರೀಕ್ಷಾ ವಾಹಕವನ್ನು ವಿನ್ಯಾಸಗೊಳಿಸಿದೆ.
ಈ ಬೆಳವಣಿಗೆಯನ್ನು ದೃಢೀಕರಿಸಿರುವ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು, ಹೊಸ ವಾಹಕವು ಪರೀಕ್ಷೆಗೆ ಸಿದ್ಧವಾಗಿದೆ ಮತ್ತು ಯೋಜನೆಗೂ ಮುನ್ನ ಕ್ರೂ ಎಸ್ಕೇಪ್ ಸಿಸ್ಟಮ್ ದೋಷರಹಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ವಾಹಕವನ್ನು ಸಿದ್ಧಪಡಿಸಲಾಗಿದೆ ಎಂದಿದ್ದಾರೆ.
“ಕ್ರೂ ಎಸ್ಕೇಪ್ ಸಿಸ್ಟಮ್ ಗಗನಯಾನ ಯೋಜನೆಯ ಒಂದು ಪ್ರಮುಖ ಅಂಶವಾಗಿದೆ, ಏಕೆಂದರೆ ಇದು ಪ್ರಯಾಣದ ಸಮಯದಲ್ಲಿ ಅಥವಾ ಗಗನಯಾತ್ರಿಗಳ ವಾಸ್ತವ್ಯದ ಸಮಯದಲ್ಲಿ ಯಾವುದೇ ಅವಘಢಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಯಾವುದೇ ಘಟನೆಯಿಂದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮತ್ತು ಅವರನ್ನು ಮತ್ತೆ ಸುರಕ್ಷತೆಯತ್ತ ತರಲು ನಾವು ಸಮರ್ಥರಾಗಿರಬೇಕು. ಇದಕ್ಕಾಗಿ ನಾವು ಪ್ಯಾಡ್ ಅಬಾರ್ಟ್ ಟೆಸ್ಟ್ (ಪಿಎಟಿ) ಅಥವಾ ಇನ್-ಫ್ಲೈಟ್ ಟೆಸ್ಟ್ ನಂತಹ ಅನೇಕ ಪರೀಕ್ಷೆಗಳನ್ನು ಮಾಡಬೇಕಾಗಿದೆ”ಎಂದು ಶಿವನ್ ಹೇಳಿದ್ದಾರೆ.
ಸಿಬ್ಬಂದಿಯ ಇನ್ ಫ್ಲೈಟ್ ಎಸ್ಕೇಪ್ಗಾಗಿ ಹೊಸ ಪರೀಕ್ಷಾ ವಾಹಕವನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
“ಪ್ರೊಪಲ್ಷನ್ ಕ್ರೂ ಮಾಡ್ಯೂಲ್ನ ಮೇಲ್ಭಾಗದಲ್ಲಿರುತ್ತದೆ, ಇದರಿಂದಾಗಿ ಮಾಡ್ಯೂಲ್ ಅನ್ನು ಎತ್ತುವ ಮೂಲಕ ಸಿಬ್ಬಂದಿಯನ್ನು ಎಳೆಯಲು ಮತ್ತು ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸಾಧ್ಯವಾಗುತ್ತದೆ. ಅಲ್ಲದೇ, ಇಸ್ರೋ ನಿರ್ಣಾಯಕ ಪ್ಯಾರಚೂಟ್ ನಿಯೋಜನೆ ಕಾರ್ಯವಿಧಾನಗಳನ್ನು ಸಹ ಈ ವರ್ ಪರೀಕ್ಷಿಸುತ್ತಿದೆ, ಇದು ತುಂಬಾ ಸಂಕೀರ್ಣವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.