ನವದೆಹಲಿ: ಸೈನ್ಯದಲ್ಲಿ ಪುರುಷರಂತೆಯೇ ಸಮಾನ ಸ್ಥಾನಮಾನಗಳನ್ನು, ಅಧಿಕಾರಗಳನ್ನು ಮಹಿಳೆಯರಿಗೂ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮೇಜರ್ ಜನರಲ್ ಮಾಧುರಿ ಕಾನಿಟ್ಕರ್ ಅವರು ಶನಿವಾರ ಲೆಫ್ಟಿನೆಂಟ್ ಜನರಲ್ ಸ್ಥಾನವನ್ನು ಅಲಂಕರಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ಅವರು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಪ್, ಮೆಡಿಕಲ್ (ಚೀಫ್ ಡಿಫೆನ್ಸ್ ಸ್ಟಾಫ್ನ ಅಡಿಯಲ್ಲಿ) ಗಳ ಡೆಪ್ಯುಟಿ ಇನ್ಚಾರ್ಜ್ ಆಗಿ ಬಡ್ತಿ ಹೊಂದಿದ್ದಾರೆ.
ಅಷ್ಟೇ ಅಲ್ಲದೇ ಭಾರತೀಯ ಸೇನೆಯಲ್ಲಿ ಶಿಶುವೈದ್ಯರಾಗಿ ನಿಯೋಜನೆ ಹೊಂದಿದ ಮೂರನೇಯ ಭಾರತೀಯ ಮಹಿಳೆ ಎಂಬ ಕೀರ್ತಿಗೂ ಇವರದ್ದು. ಅವರ ಪತಿ ರಾಜೀವ್ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದು, ಸೇನೆಯಲ್ಲಿ ಉನ್ನತ ಹುದ್ದೆಯನ್ನಲಂಕರಿಸಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕಾನಿಟ್ಕರ್ ಅವರು ಕಳೆದ 37 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತನ್ನ ಹುದ್ದೆ ಪಾರದರ್ಶಕ ಹಾಗೂ ಗೌರವಾನ್ವಿತವಾಗಿದ್ದು, ಇಲ್ಲಿ ಅಸಾಧ್ಯವಾದುದನ್ನು ಸಾಧಿಸುವುದಕ್ಕೆ ವಿಫುಲ ಅವಕಾಶಗಳಿವೆ ಎಂಬುದು ಕಣಿಟ್ಕರ್ ಅವರ ಅಭಿಪ್ರಾಯ. ಕಳೆದ ವರ್ಷವೇ ಲೆಫ್ಟಿನೆಂಟ್ ಜನರಲ್ ಶ್ರೇಣಿಗೆ ಆಯ್ಕೆಗೊಂಡಿದ್ದರೂ, ಹುದ್ದೆಯನ್ನು ಶನಿವಾರವಷ್ಟೇ ಅಲಂಕರಿಸಿದ್ದಾರೆ.
ಎಎಫ್ಎಂಸಿ ಯಲ್ಲಿ ಟಾಪರ್ ಆಗಿರುವ ಕಾನಿಟ್ಕರ್, ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಖ್ಯಾತಿಗೆ ಭಾಜನರಾಗಿ ರಾಷ್ಟ್ರಪತಿಗಳಿಂದ ಚಿನ್ನದ ಪದಕವನ್ನೂ ಪಡೆದಿದ್ದಾರೆ. ನಂತರ ಎಐಐಎಂಎಸ್ನಲ್ಲಿ ಪಿಡಿಯಾಟ್ರಿಕ್ಸ್ನಲ್ಲಿ ಪೋಸ್ಟ್ ಗ್ರಾಜುಯೆಶನ್ ಮತ್ತು ಪೀಡಿಯಾಟ್ರಿಕ್ ನೆಪ್ರೋಲಜಿಯಲ್ಲಿ ತರಬೇತಿಯನ್ನು ಸಹ ಪೂರೈಸಿದ್ದಾರೆ. ಜೊತೆಗೆ ಇವರು ಪ್ರಧಾನ ಮಂತ್ರಿಗಳ ಸೈಂಟಿಫಿಕ್ ಮತ್ತು ಟೆಕ್ನಿಕಲ್ ಅಡ್ವೈಸರಿ ಬೋರ್ಡ್ನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸೇನೆಯ ಮೊದಲ ತರಬೇತಿ ಪಡೆದ ಪೀಡಿಯಟ್ರಿಕ್ ನೆಪ್ರೋಲಾಜಿಸ್ಟ್ ಆಗಿದ್ದಾರೆ. ಅಲ್ಲದೆ ದೆಹಲಿ ಮತ್ತು ಪುಣೆಯಲ್ಲಿ ಮಕ್ಕಳಲ್ಲಿನ ಮೂತ್ರಪಿಂಡದ ಖಾಯಿಲೆಗಳ ಮೇಲ್ವಿಚಾರಣೆಗಾಗಿ ಏಕಾಂಗಿಯಾಗಿ ಯೂನಿಟ್ಗಳನ್ನು ಸ್ಥಾಪಿಸಿದವರಾಗಿದ್ದಾರೆ. ಪ್ರಥಮ ಮಹಿಳಾ ಡೀನ್ ಆಗಿ 2017ರಲ್ಲಿ ಮತ್ತೆ ಎಎಫ್ಎಂಸಿಗೆ ಮರಳಿದ್ದಾರೆ. ಈ ಹುದ್ದೆಯಲ್ಲಿ ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಇವರು ಕಳೆದ ವರ್ಷದಲ್ಲಿ ಉದಂಪುರ್ನಲ್ಲಿ ಮೇಜರ್ ಜನರಲ್ ಮೆಡಿಕಲ್ ಆಗಿ ಹುದ್ದೆಯನ್ನು ನಿರ್ವಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.