ಮೇಘಾಲಯ : ಬೆದರಿಕೆ ವಿರೋಧಿ ಆ್ಯಪ್ ರಚಿಸಿರುವ ಒಂಬತ್ತು ವರ್ಷದ ಮೇಘಾಲಯದ ಹುಡುಗಿ ಮೈದೈಬಹುನ್ ಮಜಾವ್ ಇದೀಗ ಕ್ಯಾಲಿಫೋರ್ನಿಯಾದಲ್ಲಿನ ಸಿಲಿಕಾನ್ ವ್ಯಾಲಿಗೆ ತೆರಳಲು ಸಜ್ಜಾಗಿದ್ದಾಳೆ. ಆಕೆಗೆ ಅಲ್ಲಿಗೆ ತೆರಳಲು ಆಹ್ವಾನ ಬಂದಿದೆ.
ವರದಿಗಳ ಪ್ರಕಾರ, ಮಜಾವ್ ಶಿಲ್ಲಾಂಗ್ನಲ್ಲಿ ಓದುತ್ತಿರುವ 4 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ವೈಟ್ ಹ್ಯಾಟ್ ಜೂನಿಯರ್ ಎಂಬ ಆನ್ಲೈನ್ ಪೋರ್ಟಲ್ನಿಂದ ಆಯ್ಕೆಯಾದ 12 ವಿಜೇತರಲ್ಲಿ ಈಕೆ ಒಬ್ಬಳು. ಅವಳು ಈಶಾನ್ಯ ಪ್ರದೇಶದ ಕಿರಿಯ ಉದ್ಯಮಿಯೂ ಆಗಿದ್ದಾಳೆ.
ಕೋಡಿಂಗ್ನ ಮೂಲಭೂತ ಅಂಶಗಳನ್ನು ಕಲಿಯಲು ಮಕ್ಕಳಿಗೆ ಸಹಾಯ ಮಾಡುವ ವೈಟ್ ಹ್ಯಾಟ್ ಜೂನಿಯರ್ ಪೋರ್ಟಲ್, ಈ ಬಗ್ಗೆ ಟ್ವೀಟ್ ಮಾಡಿದ್ದು, “ಮಜಾವ್ ಅವರು ಆಯ್ಕೆಯಾದ ನಮ್ಮ 12 ಜನ ವಿಜೇತರಲ್ಲಿ ಒಬ್ಬರು! ಆಕೆ ಶೀಘ್ರದಲ್ಲೇ ಸಿಲಿಕಾನ್ ವ್ಯಾಲಿಗೆ ತೆರಳಿ ಗೂಗಲ್ ವಿಜ್ಞಾನಿಗಳು, ವೇಮೊ ಎಂಜಿನಿಯರ್ಗಳು, ನೆಕ್ಸಸ್ ವೆಂಚರ್ಸ್ನ ವಿಸಿ ಮತ್ತು ಔಲ್ ವೆಂಚರ್ಸ್ನ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ” ಎಂದಿದೆ.
ಸಿಲಿಕಾನ್ ವ್ಯಾಲಿಯಲ್ಲಿ ಪ್ರೇಕ್ಷಕರ ಮುಂದೆ ಆಕೆ ತನ್ನ ಅಪ್ಲಿಕೇಶನ್ನ ಪ್ರಸ್ತುತಿಯನ್ನು ನೀಡಲಿದ್ದಾರೆ. ಆಕೆಯ ಅಪ್ಲಿಕೇಶನ್ ಪ್ರಪಂಚದಾದ್ಯಂತ, ವಿಶೇಷವಾಗಿ ಬೆದರಿಕೆ ಸಮಸ್ಯೆಗಳು ಹೆಚ್ಚರುವ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.
ಅವರು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವೈಟ್ ಹ್ಯಾಟ್ ಜೂನಿಯರ್ನೊಂದಿಗೆ ಸೇರಿಕೊಂಡ ಈಕೆ ಮೂರು ತಿಂಗಳಲ್ಲಿ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾಳೆ. ಅನಾಮಧೇಯವಾಗಿ ಬೆದರಿಸುವವರ ವಿರುದ್ಧ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರು, ಪೋಷಕರು ಮತ್ತು ಇತರರನ್ನು ಎಚ್ಚರಿಸಲು ಅಪ್ಲಿಕೇಶನ್ ಸಹಾಯ ಮಾಡುತ್ತದೆ.
ಈಕೆ ಇನ್ನೂ ಇತರ ಆ್ಯಪ್ಗಳನ್ನು ಅಭಿವೃದ್ಧಿಪಡಿಸುವತ್ತ ಕಾರ್ಯೋನ್ಮುಖಗೊಂಡಿದ್ದಾಳೆ.
ಇತ್ತೀಚೆಗಷ್ಟೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ರಮೇಶ್ ಪೋಖ್ರಿಯಾಲ್ ಅವರು ಈಕೆಯನ್ನು ಅಭಿನಂದಿಸಿ ಸನ್ಮಾನಿಸಿದ್ದರು.
Union HRD Minister met and congratulated Meaidaibahun Majaw, a Class 4 student, in #Shillong today. Meaidaibahun has developed an #antibullying app.
The app allows victims to report their bullies to the authorities without revealing their identity. pic.twitter.com/zIdb5IuBri
— Ministry of HRD (@HRDMinistry) February 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.