ಅಹ್ಮದಾಬಾದ್: ನಾಲ್ಕು ವರ್ಷಗಳಿಗೊಮ್ಮೆ ಬರುವ ಫೆ. 29 ಅಧಿಕ ವರ್ಷ ಇಂದು ಬಂದಿದೆ. ಈ ಹಿನ್ನಲೆಯಲ್ಲಿ ಇಂದು ಗುಜರಾತಿನ ಕೆವಾಡಿಯಾದಲ್ಲಿ ಇರುವ ವಿಶ್ವದ ಅತೀ ಎತ್ತರದ ಪ್ರತಿಮೆ ‘ಏಕತಾ ಪ್ರತಿಮೆ’ ಬಳಿ ವಡೋದರ ಯೋಗನಿಕೇತನ್ನ 182 ಯೋಗಾಭ್ಯಾಸಕಾರರು 108 ಸೂರ್ಯ ನಮಸ್ಕಾರಗಳನ್ನು ಮಾಡಿದರು.
ಸೂರ್ಯ ನಮಸ್ಕಾರ 12 ಯೋಗ ಭಂಗಿಗಳ ಸರಣಿಯಾಗಿದ್ದು, ದೇಹ ಮತ್ತು ಮನಸ್ಸಿನ ಮೇಲೆ ಅಗಾಧವಾದ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷ ಸಂಭವಿಸುತ್ತದೆ. ಕ್ಯಾಲೆಂಡರ್ ವರ್ಷವನ್ನು ಖಗೋಳ ವರ್ಷದೊಂದಿಗೆ ಹೊಂದಾಣಿಕೆಯಲ್ಲಿ ಇರಿಸಲು ಅಥವಾ ಸೂರ್ಯನ ಸುತ್ತ ಪೂರ್ಣ ವೃತ್ತವನ್ನು ಮಾಡಲು ಭೂಮಿಯು ತೆಗೆದುಕೊಳ್ಳುವ ಸಮಯವು ಪ್ರತಿ ನಾಲ್ಕು ವರ್ಷಗಳ ನಂತರ ಸಂಭವಿಸುತ್ತದೆ.
ಸರ್ದಾರ್ ವಲ್ಲಭಭಾಯ್ ಅವರ ಪ್ರತಿಮೆಯ ಮುಂದೆ ನಿಂತ ಯೋಗಾಸಕ್ತರು ಸೂರ್ಯ ನಮಸ್ಕಾರಗಳನ್ನು ಮಾಡಿದರು. ಈ ಮೂಲಕ ಅಧಿಕ ವರ್ಷವನ್ನು ಸಂಭ್ರಮಿಸಿದರು. ಪ್ರತಿಯು 182 ಮೀಟರ್ ಎತ್ತರವಿದ್ದು, ಇದರ ಸಲುವಾಗಿ 182 ಸೂರ್ಯ ನಮಸ್ಕಾರಗಳನ್ನು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.